ADVERTISEMENT

ಶುಕ್ರವಾರ, 9–9–1994

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 20:00 IST
Last Updated 8 ಸೆಪ್ಟೆಂಬರ್ 2019, 20:00 IST
   

ಕ್ಷಿಪಣಿ ಖರೀದಿ: ಪಾಕ್‌ ವಿರುದ್ಧಕ್ರಮಕ್ಕೆ ಅಮೆರಿಕ ನಕಾರ

ವಾಷಿಂಗ್ಟನ್, ಸೆ. 8 (ಪಿಟಿಐ)– ಪಾಕಿಸ್ತಾನವು ಚೀನಾದಿಂದ ಎಂ–11 ಕ್ಷಿಪಣಿಗಳನ್ನು ಖರೀದಿಸಿರುವ ವಿಷಯವನ್ನು ಇಲ್ಲಿನ ಪಾಕ್‌ ರಾಯಭಾರ ಕಚೇರಿಯ ರಾಜಕೀಯ ಸಲಹೆಗಾರ ಜಮೀರ್ ಅಕ್ರಂ ಖಚಿತಪಡಿಸಿದ್ದರೂ ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮ ಇಲ್ಲ ಎಂದು ಅಮೆರಿಕದ ವಿದೇಶಾಂಗ ಖಾತೆ ಇಂದು ಇಲ್ಲಿ ಸ್ಪಷ್ಟಪಡಿಸಿತು.

ಕ್ಷಿಪಣಿ ಖರೀದಿ ವ್ಯವಹಾರದ ಬಗ್ಗೆ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯು ಇದಕ್ಕೂ ಮುನ್ನ ಬೇಹುಗಾರಿಕೆ ಮೂಲಗಳನ್ನು ಉದ್ಧರಿಸಿ ವರದಿ ಮಾಡಿತ್ತು. ಈ ವ್ಯವಹಾರ ಪುರಾವೆ ಸಹಿತ ದೃಢಪಟ್ಟರೆ ಪಾಕಿಸ್ತಾನ ಹಾಗೂ ಚೀನಾಗಳೆರಡರ ವಿರುದ್ಧವೂ ನಿಷೇಧ ಹೇರಲಾಗುವುದು ಎಂದು ತಿಳಿಸಿದ ಅಮೆರಿಕ ಸರ್ಕಾರ ಈಗ ತನ್ನ ನಿಲುವು ಬದಲಿಸಿದೆ.

ADVERTISEMENT

ಸೈನಿಕ ಕಾರ್ಯಾಚರಣೆಗೆ ಭುಟ್ಟೊ ಕರೆ

ನವದೆಹಲಿ, ಸೆ. 8 (ಪಿಟಿಐ)– ಕಾಶ್ಮೀರದಲ್ಲಿ ಕುವೈತ್ ರೀತಿಯ ಸೈನಿಕ ಕಾರ್ಯಾಚರಣೆ ನಡೆಸುವಂತೆ ಪಾಕಿಸ್ತಾನದ ಪ್ರಧಾನಿ ಬೆನಜೀರ್ ಭುಟ್ಟೊ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಇಸ್ಲಾಮಾಬಾದಿನಲ್ಲಿ ಇಸ್ಲಾಂ ರಾಷ್ಟ್ರ ಸಂಘದ ವಿದೇಶಾಂಗ ಸಚಿವರುಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾಡಿದ ಭಾಷಣವನ್ನು ಸಿಎನ್‌ಎನ್ ಪ್ರಸಾರ ಮಾಡಿದೆ. ‘ಕಾಶ್ಮೀರಿ ಜನರು ತಮ್ಮ ಹೃದಯ ಹಾಗೂ ಮನಸ್ಸಿನಿಂದಲೂ ಪಾಕಿಸ್ತಾನೀಯರು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.