ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 6.4.1971

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 19:30 IST
Last Updated 5 ಏಪ್ರಿಲ್ 2021, 19:30 IST
   

ಸಂಪುಟ ರಚನೆ ಪ್ರಯತ್ನ ಕಾಣದಿದ್ದರೆ ವಿಧಾನಸಭೆ ವಿಸರ್ಜನೆ ಖಚಿತ
ಬೆಂಗಳೂರು, ಏ. 5–
ಇನ್ನು ಒಂದೆರಡು ದಿನಗಳಲ್ಲಿ ಹೊಸ ಸರ್ಕಾರ ಸ್ಥಾಪಿಸುವ ಹಾದಿಯಲ್ಲಿ ರಾಜಕೀಯ ಬೆಳವಣಿಗೆ ಆಗದಿದ್ದಲ್ಲಿ ರಾಜ್ಯಪಾಲರು ವಿಧಾನಸಭೆ ಯನ್ನು ವಿಸರ್ಜಿಸುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡುವುದು ಖಚಿತವಾಗಿದೆ.

ರಾಷ್ಟ್ರಪತಿ, ವಿಧಾನಸಭೆಯನ್ನು ವಿಸರ್ಜಿಸಿ ಮರುಚುನಾವಣೆ ನಡೆಯಲು ಆಜ್ಞೆ ಮಾಡಿದರೂ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಂಭವವಿದ್ದಂತೆ ಕಾಣದು.

ಚುನಾವಣೆ ನಡೆಸಲು ಮಳೆಗಾಲ ಮುಗಿಯಬೇಕಾಗುತ್ತದೆ. ಅಂದರೆ ಅಕ್ಟೋಬರ್‌ವರೆಗೆ ರಾಷ್ಟ್ರಪತಿ ಆಡಳಿತ ಮುಂದುವರಿಯಬೇಕಾಗುತ್ತದೆ.

ADVERTISEMENT

ಬಾಂಗ್ಲಾ ದೇಶದ ಪೂರ್ವವಲಯ ವಿಮೋಚನಾ ಸೇನೆಯ ವಶ
ಅಗರ್ತಲಾ, ಏ. 5–
ಹಿರಿಯ ಪಟ್ಟಣಗಳು ಮತ್ತು ಕೆಲವು ಮುಖ್ಯ ಯಂತ್ರಸ್ಥಾವರಗಳ ಕೆಲವು ಭಾಗಗಳ ವಿನಾ ಬಾಂಗ್ಲಾದೇಶದ ಪೂರ್ವ ವಲಯವು ಸಂಪೂರ್ಣವಾಗಿ ವಿಮೋಚನಾ ಸೇನೆಯ ವಶದಲ್ಲಿದೆ.

ಸಿಲ್ಹೆಟ್ ನಗರದ ಹೊರವಲಯದಿಂದ ಢಾಕಾ ಎಲ್ಲೆವರೆಗೆ, ಮಿಮೆನ್ ಸಿಂಗ್, ಚಿತ್ತಗಾಂಗ್‌ನ ಕೆಲವು ವಲಯಗಳೂ ಸೇನೆಯ ವಶದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.