ADVERTISEMENT

50 ವರ್ಷಗಳ ಹಿಂದೆ: ಸೋಮವಾರ 5–4–1971

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 19:31 IST
Last Updated 4 ಏಪ್ರಿಲ್ 2021, 19:31 IST
   

ಸೂಕ್ತ ಸಮಯದಲ್ಲಿ ಬಾಂಗ್ಲಾದೇಶ ಮಾನ್ಯತೆ
ನವದೆಹಲಿ, ಏ. 4–
ಬಾಂಗ್ಲಾದೇಶದ ಹಂಗಾಮಿ ಸರ್ಕಾರಕ್ಕೆ ಮಾನ್ಯತೆ ಮತ್ತು ಅಲ್ಲಿನ ಸ್ವಾತಂತ್ರ್ಯ ಯೋಧರಿಗೆ ನಿರ್ದಿಷ್ಟ ನೆರವು ನೀಡಬೇಕೆಂದು ಇಂದು ಅಖಿಲ ಭಾರತ ಆಡಳಿತ ಕಾಂಗ್ರೆಸ್ ಸಮಿತಿ ಅಧಿವೇಶನದಲ್ಲಿ ಉದ್ರಿಕ್ತ ಸದಸ್ಯರು ಪಟ್ಟು ಹಿಡಿದು ಆಗ್ರಹ ಮಾಡಿದರೂ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಾಗಲಿ, ವಿದೇಶಾಂಗ ಸಚಿವ ಶ್ರೀ ಸ್ವರಣಸಿಂಗರಾಗಲಿ ಅದಕ್ಕೆ ಸ್ಪಷ್ಟ ಪ್ರತಿಕ್ರಿಯೆ ಸೂಚಿಸಲಿಲ್ಲ.

ಆದರೆ ‘ಸೂಕ್ತ ಸಮಯದಲ್ಲಿ’ ಮಾನ್ಯತೆ ನೀಡುವುದಾಗಿ ಶ್ರೀ ಸ್ವರಣ ಸಿಂಗ್ ಹೇಳಿ ಸದಸ್ಯರನ್ನು ಸ್ವಲ್ಪ ಸಮಾಧಾನಪಡಿಸಿದರು.

‘ಇಂತಹ ಕ್ರಮಗಳಲ್ಲಿ ಅವಸರ ಬಿದ್ದರೆ, ನಮ್ಮ ಉದ್ದೇಶವೇ ವಿಫಲವಾಗುತ್ತದೆ’ ಎಂದು ಅವರು ಉತ್ತರ ಕೊಟ್ಟರು.

ADVERTISEMENT

ಸಸ್ಯ ರೋಗಲಕ್ಷಣ ವಿಶ್ಲೇಷಣೆ ಅಂತರ ರಾಷ್ಟ್ರೀಯ ಅಧ್ಯಯನ ಕೇಂದ್ರ ಸ್ಥಾಪನೆಗೆ ಸಿದ್ಧತೆ
ಧಾರವಾಡ, ಏ. 4–
ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಕೃಷಿ ಸಂಶೋಧನೆಗೆ ಮೂಲ ಕೇಂದ್ರವಾಗಿ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸಸ್ಯ ರೋಗ ಲಕ್ಷಣ ವಿಶ್ಲೇಷಣೆಯ ಉನ್ನತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದೆಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಕೆ.ಸಿ.ನಾಯಕ್ ಅವರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.