ADVERTISEMENT

50 ವರ್ಷಗಳ ಹಿಂದೆ: ಬುಧವಾರ, ಜೂನ್ 7, 1972

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 19:30 IST
Last Updated 6 ಜೂನ್ 2022, 19:30 IST
   

ದೇವಾಲಯಗಳ ನಿಧಿ ನಿರ್ವಹಣೆ: ಆಡಳಿವ ವ್ಯವಸ್ಥೆ ಬಗ್ಗೆ ಪ್ರತ್ಯೇಕ ಶಾಸನ ರಚನೆ
ಬೆಂಗಳೂರು, ಜೂನ್ 6–
ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಆದಾಯವಿರುವ ದೇವಾಲಯಗಳ ನಿಧಿಯ ನಿರ್ವಹಣೆ ಯೋಗ್ಯ ರೀತಿಯಲ್ಲಿ ನಡೆಯುವಂತಾಗಲು ಸರ್ಕಾರ ಈ ದೇವಾಲಯಗಳ ಆಡಳಿತ ವ್ಯವಸ್ಥೆ ಬಗ್ಗೆ ಪ್ರತ್ಯೇಕ ಶಾಸನಗಳನ್ನು ರಚಿಸಲಿದೆ.

ಇಂದು ಕಂದಾಯ ಸಚಿವ ಶ್ರೀ ಎನ್. ಹುಚ್ಚಮಾಸ್ತಿಗೌಡ ಹಾಗೂ ಪೌರಾಡಳಿತ ಸಚಿವ ಶ್ರೀ ಬಿ. ಬಸವಲಿಂಗಪ್ಪ ಅವರುಗಳ ನಡುವೆ ನಡೆದ ಮಾತುಕತೆ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.

ಈ ನಿರ್ಧಾರವನ್ನನುಸರಿಸಿ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಪ್ರಸಿದ್ಧ ಎಲ್ಲಮ್ಮ ದೇವಸ್ಥಾನದ ಆಡಳಿತ ವ್ಯವಸ್ಥೆ ಸಂಬಂಧದಲ್ಲಿ ಪ್ರಥಮವಾಗಿ ಶಾಸನ ರಚಿಸಲಾಗುವುದು.

ADVERTISEMENT

ಎಂ.ಎಸ್. ಕೃಷ್ಣಮೂರ್ತಿ ಅವರ ಕೃತಿಗೆ ಪ್ರಥಮ ಬಹುಮಾನ
ನವದೆಹಲಿ, ಜೂನ್ 6–
ಹಿಂದಿ ಮಾತನಾಡದ ರಾಜ್ಯಗಳ 10 ಮಂದಿ ಹಿಂದೀ ಲೇಖಕರು 1971–72ನೇ ಸಾಲಿನಲ್ಲಿ ತಮ್ಮ ಹಿಂದಿ ಭಾಷಾ ಸಾಹಿತ್ಯ ಕೃತಿಗಾಗಿ ಬಹುಮಾನ ಗಳಿಸಿದ್ದಾರೆ.

ಈ ಲೇಖಕರ ಮಾತೃಭಾಷೆ ಹಿಂದಿಯಲ್ಲ. ಕನ್ನಡ ಮಾತೃಭಾಷೆಯ ಡಾ.ಎಂ.ಎಸ್. ಕೃಷ್ಣಮೂರ್ತಿ (ಇಂದ್ರೇಶ್‌) ಅವರು ಹಿಂದಿ ಯಲ್ಲಿ ಬರೆದ ‘ಅಪರಾಜಿತ’ ಕೃತಿಗೆ ಪ್ರಥಮ ಬಹುಮಾನ ದೊರಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.