ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 18–12–1970

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 19:30 IST
Last Updated 17 ಡಿಸೆಂಬರ್ 2020, 19:30 IST
   

ಕೊಲೆಗಳಲ್ಲಿ ಪ್ರಥಮ ಸ್ಥಾನ ಬೆಳಗಾವಿ
ಬೆಂಗಳೂರು, ಡಿ. 17–
ಅತಿಹೆಚ್ಚು ಕೊಲೆಗಳು ಸಂಭವಿಸಿದ ಜಿಲ್ಲೆಯೆಂದು ಬೆಳಗಾವಿ ಕಳೆದ ವರ್ಷದಂತೆ ಈ ವರ್ಷವೂ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ಈ ಜಿಲ್ಲೆಯಲ್ಲಿ ಕೊಲೆಗಳ ಸಂಖ್ಯೆ ಕಡಿಮೆ.

1969ರಲ್ಲಿ ತಿಂಗಳಿಗೆ ಸರಾಸರಿ 9 ಕೊಲೆಗಳು ಸಂಭವಿಸಿದ್ದರೆ ಈ ವರ್ಷ ಸರಾಸರಿ ಆರು ಮಾತ್ರ. 1970ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದ ಕೊಲೆಗಳ ಸಂಖ್ಯೆ 78. ಅಂದರೆ ಕಳೆದ ವರ್ಷಕ್ಕಿಂತ 40 ಕಡಿಮೆ.

ಅತಿಹೆಚ್ಚು ಕೊಲೆಗಳು ಸಂಭವಿಸಿದ ಜಿಲ್ಲೆಗಳಲ್ಲಿ ಕಲ್ಬುರ್ಗಿ (65), ಬಿಜಾಪುರ (59) ಮತ್ತು ಧಾರವಾಡ (49) ಅನುಕ್ರಮವಾಗಿ ದ್ವಿತೀಯ, ತೃತೀಯ ಮತ್ತು 4ನೇ ಸ್ಥಾನಗಳನ್ನು ಪಡೆದಿವೆ. ಅತ್ಯಂತ ಕಡಿಮೆ ಕೊಲೆಗಳು ಸಂಭವಿಸಿದ ಜಿಲ್ಲೆಗಳೆಂದರೆ ಕೆಜಿಎಫ್‌ (7) ಹಾಗೂ ಚಿಕ್ಕಮಗಳೂರು (7).

ADVERTISEMENT

ಇಂದು ಸಂಸತ್ತಿನಲ್ಲಿ ಮಹಾಜನ್‌ ವರದಿ ಮಂಡನೆ
ನವದೆಹಲಿ, ಡಿ. 17–
ಮೈಸೂರು–ಮಹಾರಾಷ್ಟ್ರ ಮತ್ತು ಮೈಸೂರು–ಕೇರಳ ನಡುವಣ ಗಡಿ ವಿವಾದಗಳನ್ನು ಕುರಿತ ಮಹಾಜನ್‌ ಆಯೋಗದ ವರದಿಯನ್ನು ನಾಳೆ ಸಂಸತ್ತಿನಲ್ಲಿ ಉಭಯ ಸದನಗಳಲ್ಲೂ ಮಂಡಿಸಲಾಗುವುದು. ಮಹಾಜನ್‌ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದ ಮೂರು ವರ್ಷಗಳ ನಂತರ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರಧಾನಿಯನ್ನು ಇಂದು ಭೇಟಿ ಮಾಡಿದ ಮೈಸೂರು ರಾಜ್ಯ ಸಂಸತ್‌ ಸದಸ್ಯರ ನಿಯೋಗಕ್ಕೆ ಅವರು ಈ ವಿಷಯವನ್ನು ತಿಳಿಸಿದರಲ್ಲದೆ, ಆಯೋಗದ ಬಗ್ಗೆ ನಿರ್ಧಾರ ಕೈಗೊಂಡಿಲ್ಲ, ಕೈಗೊಳ್ಳುವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.