ಪಕ್ಷಾಂತರ ಶಿಕ್ಷಾರ್ಹಗೊಳಿಸಿ ಸುಗ್ರೀವಾಜ್ಞೆ: ಎಸ್ಸೆನ್ ಬಯಕೆ
ಮುನ್ಷಿನಗರ, ಮೇ 16– ಪಕ್ಷಾಂತರವನ್ನು ಶಿಕ್ಷಾರ್ಹವೆಂದು ಘೋಷಿಸಬೇಕು- ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಪೀಠವನ್ನು ಇದೀಗ ತ್ಯಜಿಸಿರುವ ಎಸ್.ನಿಜಲಿಂಗಪ್ಪನವರ ಅಭಿಪ್ರಾಯವಿದು. ಇದಕ್ಕಾಗಿ ರಾಷ್ಟ್ರಪತಿ ಸುಗ್ರೀವಾಜ್ಞೆ ಹೊರಡಿಸಬೇಕೆಂಬುದೂ ಅವರ ಕಳಕಳಿ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಜಲಿಂಗಪ್ಪನವರು, ಪಕ್ಷಾಂತರವು ಚುನಾವಣೆಯ ಬಳಿಕ ಒಳ್ಳೆ ಸಂಪಾದನೆಯ ವಿಷಯವಾಗಿದೆಯೆಂದೂ ನುಡಿದರು.
ಸಾದಿಕ್ ಅಲೀ: ಸಂಸ್ಥಾ ಕಾಂಗ್ರೆಸ್ ‘ಹಂಗಾಮಿ’ ಅಧ್ಯಕ್ಷ
ಮುನ್ಷಿನಗರ, ಮೇ 16– ಸಂಸ್ಥಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಸಾದಿಕ್ ಅಲೀ ಅವರು ಇಂದು ಪಕ್ಷದ ‘ಹಂಗಾಮಿ’ ಅಧ್ಯಕ್ಷ
ರಾಗಿ ಸರ್ವಾನುಮತದಿಂದ ಚುನಾಯಿತರಾದರು. ನಿವೃತ್ತರಾದ ಅಧ್ಯಕ್ಷ ನಿಜಲಿಂಗಪ್ಪನವರ ಈ ನಾಮಕರಣವನ್ನು ಎಐಸಿಸಿ ಒಪ್ಪಿಕೊಂಡು, ಹೊಸ ಅಧ್ಯಕ್ಷರ ಆಯ್ಕೆ ಸಂಬಂಧದಲ್ಲಿ ತಲೆದೋರಿದ್ದ ಬೃಹತ್ ತೊಡಕನ್ನು ದಾಟಲು ದಾರಿ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.