ADVERTISEMENT

ಕಾಶ್ಮೀರ: ಭಾರತ, ಪಾಕ್ ನಡುವೆ ಮಧ್ಯಸ್ಥಿಕೆಗೆ ಇರಾನಿನ ಷಾ ಸಿದ್ಧ

ವಾರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 20:15 IST
Last Updated 4 ಜನವರಿ 2019, 20:15 IST

ಕಾಶ್ಮೀರ: ಭಾರತ, ಪಾಕ್ ನಡುವೆ ಮಧ್ಯಸ್ಥಿಕೆಗೆ ಇರಾನಿನ ಷಾ ಸಿದ್ಧ

ನವದೆಹಲಿ, ಜ. 4– ಭಾರತ, ಪಾಕಿಸ್ತಾನ ಒಪ್ಪಿದರೆ, ಈ ಎರಡು ರಾಷ್ಟ್ರಗಳ ನಡುವೆ ಕಾಶ್ಮೀರ ಪ್ರಶ್ನೆ ಬಗ್ಗೆ ಮಧ್ಯಸ್ಥಿಕೆ ವಹಿಸಲು ತಾವು ಸಿದ್ಧ ಎಂದು ಇರಾನಿನ ಷಾ ಇಂದು ತಿಳಿಸಿದರು.

ಭಾರತ, ಪಾಕಿಸ್ತಾನಗಳ ನಡುವೆ ಮೈತ್ರಿ ಏರ್ಪಡಿಸುವುದೇ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಅತ್ಯುತ್ತಮ ಭರವಸೆ ಎಂದು ತಮಗೆ ಖಚಿತಪಟ್ಟಿದೆ ಎಂದು ಇರಾನಿನ ದೊರೆ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಈ ಎರಡು ರಾಷ್ಟ್ರಗಳಲ್ಲಿ ಸ್ನೇಹ ಏರ್ಪಟ್ಟರೆ ಸಂತೋಷಪಡುವವರಲ್ಲಿ ತಾವೂ ಒಬ್ಬರು. ಈ ಉದ್ದೇಶ ಸಾಧನೆಗೆ ತಮ್ಮ ಮಧ್ಯಸ್ಥಿಕೆ ಭಾರತ, ಪಾಕಿಸ್ತಾನ ಒಪ್ಪಿದರೆ ಅದಕ್ಕೂ ಸಿದ್ಧ ಎಂದು ಷಾ ಹೇಳಿದರು.

ತುಂಬಾದಿಂದ ಮತ್ತೊಂದು ರಾಕೆಟ್ ಪ್ರಯೋಗ

ತಿರುವನಂತಪುರ, ಜ. 5– ಸಂಪೂರ್ಣ ಭಾರತೀಯ ನಿರ್ಮಿತ ರಾಕೆಟ್ ‘ಮೇನಕಾ’ವನ್ನು ಇಂದು ತುಂಬಾ ಕೇಂದ್ರದಿಂದ ಅಂತರಿಕ್ಷಕ್ಕೆ ಪ್ರಯೋಗಿಸಲಾಯಿತು. ಇದುವರೆಗೆ ಪ್ರಯೋಗಿಸಲಾಗಿರುವ ಭಾರತೀಯ ರಾಕೆಟ್‌ಗಳಲ್ಲಿ ಇದು ಆರನೆಯದು.

ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಇಪ್ಪತ್ತು ಜನರ ಸಾವು

ಮಧುರೆ, ಜ. 4– ಇಲ್ಲಿಗೆ 38 ಮೈಲಿ ದೂರದಲ್ಲಿರುವ ಶಿವಕಾಶಿಯಲ್ಲಿನ ಪಟಾಕಿ ಕಾರ್ಖಾನೆಯೊಂದರಲ್ಲಿ ನಿನ್ನೆ ಸ್ಫೋಟ ಸಂಭವಿಸಿ ತೀವ್ರವಾಗಿ ಗಾಯಗೊಂಡ 25 ಮಂದಿಯಲ್ಲಿ ಇಂದು ಮಧ್ಯಾಹ್ನದವರೆಗೆ ಇಪ್ಪತ್ತು ಮಂದಿ ಸತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.