ADVERTISEMENT

ಯೋಜನೆ, ಸಮಾಜ ಕಲ್ಯಾಣಕ್ಕೆ ಪ್ರತ್ಯೇಕ ಇಲಾಖೆ ಬೇಡ: ತುಕೋಳ್ ಆಯೋಗದ ಶಿಫಾರಸ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 17:19 IST
Last Updated 3 ಜನವರಿ 2019, 17:19 IST

ಯೋಜನೆ, ಸಮಾಜ ಕಲ್ಯಾಣಕ್ಕೆ ಪ್ರತ್ಯೇಕ ಇಲಾಖೆ ಬೇಡ: ತುಕೋಳ್ ಆಯೋಗದ ಶಿಫಾರಸ್

ಬೆಂಗಳೂರು, ಜ. 3– ಯೋಜನೆ ಮತ್ತು ಸಮಾಜ ಕಲ್ಯಾಣ ವಿಭಾಗಗಳಿಗೆ ಪ್ರತ್ಯೇಕ ಇಲಾಖೆ ಅನಗತ್ಯ. ಇದು ತುಕೋಳ್ ಆಯೋಗದ ಶಿಫಾರಸು.

ಯೋಜನಾ ಇಲಾಖೆಯನ್ನು ಸಿಬ್ಬಂದಿಯೊಡನೆ ಹಣಕಾಸಿನ ಶಾಖೆಗೆ ಮತ್ತು ಸಮಾಜ ಕಲ್ಯಾಣ ಇಲಾಖೆಯನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸುವುದು ಲೇಸು. ಸ್ಟೇಷನರಿ ಮತ್ತು ಮುದ್ರಣ ಇಲಾಖೆಯ ಆಡಳಿತ ಹತೋಟಿ ಶಿಕ್ಷಣ ಇಲಾಖೆಯಿಂದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಹೋಗುವುದು ಮೇಲು.

ADVERTISEMENT

ಆಯೋಗದ ಇತರ ಮುಖ್ಯ ಶಿಫಾರಸುಗಳು ಈ ರೀತಿ ಇವೆ: ಆಹಾರ ಧಾನ್ಯಗಳ ಮೇಲಿನ ನಿಯಂತ್ರಣ ಮತ್ತು ಈಗಿನ ಪಡಿತರ ಪದ್ಧತಿ ರದ್ದಾದ ನಂತರ ಆಹಾರ ಮತ್ತು ಸಿವಿಲ್ ಸಪ್ಲೈಸ್ ಇಲಾಖೆ ರದ್ದಾಗತಕ್ಕದ್ದು.

ಎಲ್ಲ ವಿವಾಹಗಳ ರಿಜಿಸ್ಟರ್‌ಗೆ ಸಲಹೆ

ಬೆಂಗಳೂರು, ಜ. 3– ಗೊತ್ತಾದ ಶುಲ್ಕ ತೆಗೆದುಕೊಂಡು ಎಲ್ಲಾ ವಿವಾಹಗಳನ್ನೂ ರಿಜಿಸ್ಟರ್ ಮಾಡಬೇಕೆಂದು ತುಕೋಳ್ ಆಯೋಗ ಶಿಫಾರಸು ಮಾಡಿದೆ.

ಎಚ್.ಎಂ.ಟಿ. ಯಲ್ಲಿ ಟ್ರ್ಯಾಕ್ಟರ್ ತಯಾರಿಕೆ

ನವದೆಹಲಿ, ಜ. 3– ಕೆಲವು ಕೈಗಾರಿಕೆಗಳಲ್ಲಿ ಹಿಂಜರಿತ ಇರುವುದನ್ನು ಹೋಗಲಾಡಿಸುವ ಕ್ರಮಗಳನ್ನು ಕುರಿತು ಕೈಗಾರಿಕೆಗಳ ಕೇಂದ್ರ ಸಲಹಾ ಮಂಡಳಿಯು ಇಂದು ಚರ್ಚಿಸಿತು.

ಸರ್ಕಾರಿ ಒಡೆತನದಲ್ಲಿರುವ ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಕಾರ್ಖಾನೆಯ ಸಾಮರ್ಥ್ಯವನ್ನು ಇನ್ನೂ ಹೆಚ್ಚು ಉಪಯುಕ್ತ ಮಾಡಿಕೊಳ್ಳುವ ಬಗ್ಗೆ ಬಂದ ಸಲಹೆಗಳಲ್ಲೊಂದೆಂದರೆ ಟ್ರ್ಯಾಕ್ಟರ್ ತಯಾರಿಕೆ.

ಪಂಜಾಬ್ ರಾಜ್ಯದ ಪಿಂಜೋರ್‌ನಲ್ಲಿರುವ ತನ್ನ ಕಾರ್ಖಾನೆಯಲ್ಲಿ ಟ್ರ್ಯಾಕ್ಟರ್ ತಯಾರಿಸುವುದಕ್ಕೆ ಅನುಮತಿ ಕೊಡಬೇಕೆಂದು ಸರ್ಕಾರವನ್ನು ಎಚ್.ಎಂ.ಟಿ. ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.