ADVERTISEMENT

ಶುಕ್ರವಾರ, 5–1–1968

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST

ಭಾರತ–ಪಾಕ್‌ ಮೈತ್ರಿಗಾಗಿ ಜೀವ ಮುಡಿಪಾಗಿಡಲು ಷೇಖ್‌ ಸಂಕಲ್ಪ
ನವದೆಹಲಿ, ಜ. 4– ‘ಭಾರತ–ಪಾಕಿಸ್ತಾನಗಳ ನಡುವಣ ಮೈತ್ರಿ ಮತ್ತು ಅಂತರ್‌ ಜನಾಂಗ ಹಾಗೂ ಧರ್ಮಗಳ ಐಕ್ಯಕ್ಕೆ ನನ್ನ ಜೀವಮಾನವನ್ನು ಮುಡಿಪಿಡುತ್ತೇನೆ’ ಎಂದು ಷೇಖ್‌ ಅಬ್ದುಲ್ಲಾ ಅವರು ಇಂದು ಇಲ್ಲಿ ಹೇಳಿದರು.

‘ಇಂಥ ಭಾರತ–ಪಾಕಿಸ್ತಾನಗಳ ಮೈತ್ರಿಯಲ್ಲಿಯೇ ನನ್ನ ರಾಜ್ಯದ ಶಾಂತಿ ಮತ್ತು ಸಂಪತ್ತು ಅಡಗಿದೆ’ ಎಂದೂ ಅವರು ಕಾಶ್ಮೀರದ ವಿಷಯ ಪ್ರಸ್ತಾಪಿಸಿ ನುಡಿದರು. ಎರಡು ದಿನಗಳ ಹಿಂದೆ ಬಿಡುಗಡೆಯಾದ ಅಬ್ದುಲ್ಲಾ ಅವರು ತಮ್ಮ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಸಿದ್ಧಪಡಿಸಿದ ಹೇಳಿಕೆಯಲ್ಲಿ ಈ ಅಂಶವನ್ನು ತಿಳಿಸಿದರು.

ವಿಶೇಷ ಅಂಚೆ ಚೀಟಿ ಮಾರಾಟ ರದ್ದು
ಮದ್ರಾಸ್‌, ಜ. 4–
ವಿಶ್ವ ತಮಿಳು ಸಮ್ಮೇಳನದ ಸಂದರ್ಭಕ್ಕೆ ಅಂಚೆ ಇಲಾಖೆ ಬಿಡುಗಡೆ ಮಾಡಿದ್ದ ಹದಿನೈದು ಪೈಸೆ ವಿಶೇಷ ಅಂಚೆ ಚೀಟಿಯ ಮಾರಾಟವನ್ನು ನಿಲ್ಲಿಸಲಾಗಿದೆ. ಈ ವಿಶೇಷ ಅಂಚೆ ಚೀಟಿ ಮಾರಾಟ ಗಲಭೆಗೆ ಕಾರಣವಾಗಬಹುದೆಂದು ಹೆದರಿ ಅಂಚೆ ಇಲಾಖೆ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.