ಹತ್ತಿ– ಹತ್ತಿ ಬಟ್ಟೆ ಹತೋಟಿ ಬಗ್ಗೆ ಹೊಸ ನೀತಿ
ಮುಂಬಯಿ, ಜೂನ್ 14– ಹತ್ತು ಮತ್ತು ಹತ್ತಿ ಬಟ್ಟೆಗಳ ಹತೋಟಿ ಬಗ್ಗೆ ಅನುಸರಿಸಲಾಗುವ ಹೊಸ ನೀತಿಯನ್ನು ಭಾರತ ಸರ್ಕಾರದವರು ಈ ವಾರದ ಅಂತ್ಯದಲ್ಲಿ ಪ್ರಕಟಿಸಲಿದ್ದಾರೆ.
ಭಾರತ ಸರ್ಕಾರದ ಕೈಗಾರಿಕೆ ಮತ್ತು ಸರಬರಾಯಿ ಸಚಿವ ಶ್ರೀ ಹರೆಕೃಷ್ಣ ಮೆಹತಾಬರು ಇಲ್ಲಿನ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ, ಹತ್ತಿ ಹತೋಟಿ ಮತ್ತು ಪರಮಾಂಧಿ ಬೆಲೆಯ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರವು ನಿರ್ಧರಿಸಬೇಕಾಗಬಹುದೆಂದರು.
ಸರ್ಕಾರದ ನಿರ್ಧಾರವು ಮುಖ್ಯವಾಗಿ ಬಟ್ಟೆ ಸಲಹಾ ಸಮಿತಿಯ ಶಿಫಾರಸ್ಸನ್ನವಲಂಬಿಸುವುದೆಂದೂ ಇದ್ದರೆ ಸರ್ಕಾರವು ಎಲ್ಲರನ್ನೂ ಮೆಚ್ಚಿಸಲಾರದೆಂದೂ ಮೆಹತಾಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.