75 ವರ್ಷಗಳ ಹಿಂದೆ
ಬೆಂಗಳೂರು ಬಳಿ ವಿಮಾನ ಅಪಘಾತ: ಇಬ್ಬರ ಮರಣ
ಬೆಂಗಳೂರು, ಆಗಸ್ಟ್ 29– ಭಯಂಕರ ವಿಮಾನ ಅಪಘಾತವೊಂದು ಈ ದಿನ ಬೆಂಗಳೂರು ಮಾಗಡಿ ರಸ್ತೆ ಬಳಿ ಸಂಭವಿಸಿ, ಅದರಲ್ಲಿದ್ದ ಇಬ್ಬರೂ ಸ್ಥಳದಲ್ಲಿಯೇ ದುರಂತ ಮರಣಕ್ಕೆ ತುತ್ತಾದರು.
ಸತ್ತವರಲ್ಲಿ ಒಬ್ಬರು ಹಿಂದೂಸ್ತಾನ ವಿಮಾನ ಕಾರ್ಖಾನೆಯ ಏರೋಪ್ಲೇನ್ ಓವರ್‌ಹಾಲ್ ಸಬ್‌ಡಿವಿಜನ್ ಮುಖ್ಯರು; ಮತ್ತೊಬ್ಬರು ಅಂಬಾಲದ ಭಾರತೀಯ ವೈಮಾನಿಕ ಶಾಖಾ ಶಾಲೆಯ ಫ್ಲೇಯಿಂಗ್ ಆಫೀಸರ್ ಕೌಲ್‌ರವರು.
ನಿಜಲಿಂಗಪ್ಪ ಕರ್ನಾಟಕ ಪ್ರಾಂತಾಧ್ಯಕ್ಷರು
ಹುಬ್ಬಳ್ಳಿ, ಆಗಸ್ಟ್ 29– ಹುಬ್ಬಳ್ಳಿ ಯಲ್ಲಿ ಇಂದು ಸಭೆ ಸೇರಿದ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯು ಇಂದು ಸಿದ್ದವ್ವನಹಳ್ಳಿ ನಿಜಲಿಂಗಪ್ಪ ಅವರನ್ನು ಸಮಿತಿಯ ಬರುವ ವರ್ಷದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.