75 ವರ್ಷಗಳ ಹಿಂದೆ ಈ ದಿನ
ದಕ್ಷಿಣ ಕೊರಿಯಾ ರಾಜಧಾನಿಯ ಹೊರಾಂಗಣದಲ್ಲಿ ಕಮ್ಯುನಿಸ್ಟ್ ಸೇನೆ
ಟೋಕಿಯೋ, ಜೂನ್ 26 – ಕಳೆದ ರಾತ್ರಿ ಉತ್ತರ ಕೊರಿಯಾದ ಕಮ್ಯುನಿಸ್ಟ್ ಸೇನಾಪಡೆಗಳು ದಕ್ಷಿಣ ಕೊರಿಯಾ ರಾಜಧಾನಿಗೆ 12 ಮೈಲಿ ದೂರದಲ್ಲಿರುವ ಯುಜುಂಗ್ ಬೋ ಪಟ್ಟಣವನ್ನಾಕ್ರಮಿಸಿಕೊಂಡು ರಾಜಧಾನಿ ಸೆವೌಲ್ ನಗರದ ಕಡೆಗೆ ನುಗ್ಗುತ್ತಿದ್ದಾವೆ ಎಂಬುವುದಾಗಿ ಟೋಕಿಯೋಗೆ ಸುದ್ದಿ ಬಂದಿದೆ.
ಕಮ್ಯುನಿಸ್ಟ್ ಸೇನೆಗಳಾಗಲೇ ರಾಜಧಾನಿಯ ಹೊರಾಂಗಣದಲ್ಲಿ ತಮ್ಮ ಮುಂಚೂಣಿ ದಳ ಸಹಿತ ಮುನ್ನುಗ್ಗುತ್ತಿವೆಯೆಂದು ಜಪಾನಿನ ಪತ್ರಿಕೆಗಳು ವರದಿ ಮಾಡಿವೆ.
ಶ್ರೀ ನಿಜಲಿಂಗಪ್ಪನವರಿಗೆ ಪಾರ್ಲಿಮೆಂಟ್ ಸದಸ್ಯತ್ವ
ಬೊಂಬಾಯಿ, ಜೂನ್ 26– ಭಾರತ ಪಾರ್ಲಿಮೆಂಟ್‌ನಲ್ಲಿ ಮುಂಬೈಯನ್ನು ಪ್ರತಿನಿಧಿಸುವ ಸ್ಥಾನಕ್ಕೆ ಶ್ರೀ ನಿಜಲಿಂಗಪ್ಪನವರೊಬ್ಬರೇ ಕ್ರಮಬದ್ಧವಾಗಿ ನಾಮಕರಣ ಹೊಂದಿರುವ ಹುರಿಯಾಳಾಗಿದ್ದು, ಅವರನ್ನು ಚುನಾಯಿಸಿರುವುದಾಗಿ ಅಧಿಕೃತ ಪ್ರಕಟಣೆಯೊಂದು ಇಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.