75 ವರ್ಷಗಳ ಹಿಂದೆ ಈ ದಿನ
ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಜೀನಾಮೆ
ವಾಷಿಂಗ್ಟನ್, ಸೆ. 13– ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲೂಯಿಸ್ ಜಾನ್ಸನ್ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಸ್ನೇಹಿತರಿಗಿಂತ ಹೆಚ್ಚು ಶತ್ರುಗಳನ್ನು ಹೊಂದಿದ್ದೇನೆ’ ಎಂದು ಹೇಳಿದರು.
ರಾಷ್ಟ್ರಪತಿ ಟ್ರೂಮನ್ ಅವರು ಲೂಯಿಸ್ ಜಾನ್ಸನ್ ಅವರ ರಾಜೀನಾಮೆಯನ್ನು ಸ್ವೀಕರಿಸಿದರು. ಜನರಲ್ ಗ್ರೆಗೋರಿ ಸಿ. ಮಾರ್ಷಲ್ ಅವರು ಜಾನ್ಸನ್ ಅವರ ಜಾಗವನ್ನು ತುಂಬಲಿದ್ದಾರೆ.
ಜಾನ್ಸನ್ ಅವರು 1949ರ ಮಾರ್ಚ್‌ನಿಂದ ರಕ್ಷಣಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಉಪ ರಕ್ಷಣಾ ಕಾರ್ಯದರ್ಶಿ ಸ್ಟೀಫನ್ ಅರ್ಲಿ ಅವರು ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಸೆಪ್ಟೆಂಬರ್ 30ರಿಂದ ಅದು ಅನುಷ್ಠಾನಕ್ಕೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.