
ಪ್ರಜಾವಾಣಿ ವಾರ್ತೆಮೈಸೂರಿನಲ್ಲಿ ಕಚ್ಚಾ ಫಿಲಂ ತಯಾರಿಕೆ
ಬೆಂಗಳೂರು, ನ. 21– ಭಾರತದಲ್ಲೇ ಪ್ರಥಮವಾಗಿ ಮೈಸೂರಿನಲ್ಲಿ ಕಚ್ಚಾ ಫಿಲಂ ತಯಾರಿಕೆ ಪ್ರಾರಂಭವಾಗುವುದು.
ಈ ಸಂಬಂಧ 2 ಕೋಟಿ ರೂ. ಯೋಜನೆಯನ್ನು ಇಂದು ಕೈಗಾರಿಕಾ ಸಚಿವ ಎಚ್.ಸಿ. ದಾಸಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕಚ್ಚಾ ಫಿಲಂ ಸಲಹಾ ಸಮಿತಿಯ ಸಭೆ ಪರಿಶೀಲಿಸಿತು.
ಸಭೆಗೆ ಸರ್ಕಾರದ ಕೆಲವು ಅಧಿಕಾರಿಗಳು, ಚಲನಚಿತ್ರ ತಯಾರಿಕಾಗಾರರ ಪ್ರತಿನಿಧಿಗಳು ಮತ್ತು ಬಂಡವಾಳಗಾರರು ಭಾಗ ವಹಿಸಿದ್ದರು.
ಸದ್ಯದಲ್ಲಿ ಭಾರತ ಒಂದೂವರೆ ಕೋಟಿ ರೂ.ನಷ್ಟು ಕಚ್ಚಾ ಫಿಲಂ ಅನ್ನು ಪರದೇಶಗಳಿಂದ ತರಿಸಿ ಕೊಳ್ಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.