75 ವರ್ಷಗಳ ಹಿಂದೆ
ತ್ರಿವೇಂಡ್ರಂನಲ್ಲಿ ಆಹಾರದ ಬಿಕ್ಕಟ್ಟು
ತ್ರಿವೇಂಡ್ರಂ, ಸೆಪ್ಟೆಂಬರ್ 10– ಪಟ್ಟಣದಲ್ಲಿ ಆಹಾರದ ಬಿಕ್ಕಟ್ಟು ತಲೆದೋರಿದ್ದು, ಬಹಳಷ್ಟು ನಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಈ ಬಿಕ್ಕಟ್ಟು ಸಂಭವಿಸಿದೆ.
ಪ್ರತಿ ವ್ಯಕ್ತಿಗೆ ಸೀಮಿತ ಪ್ರಮಾಣದ ಅಕ್ಕಿಯನ್ನು ಇಂದು ವಿತರಿಸಲಾಯಿತು. ಪಡಿತರ ಚೀಟಿದಾರರು, ಹೆಚ್ಚಿನ ಪಡಿತರ ಪದಾರ್ಥ ಲಭ್ಯವಿದೆಯೇ ಎಂಬ ಬಗ್ಗೆ ಅಂಗಡಿಗಳಿಗೆ ಭೇಟಿ ನೀಡಿ ವಿಚಾರಿಸಿದರು.
‘10 ಹಾಗೂ 12 ವರ್ಷದ ಇಬ್ಬರು ಮಕ್ಕಳು ಇಲ್ಲಿನ ಬೀದಿಯಲ್ಲಿ ಆಹಾರ ಇಲ್ಲದೆ ಪ್ರಜ್ಞೆ ತಪ್ಪಿದ್ದರು. ಕಳೆದ ವಾರ ಪಡಿತರ ವಿತರಿಸಿರಲಿಲ್ಲ. ಕಳೆದ ನಾಲ್ಕು ದಿನಗಳಿಂದ ನಮಗೆ ಅಕ್ಕಿ, ಕುಡಿಯುವ ನೀರು ಪೂರೈಕೆಯೂ ಸ್ಥಗಿತಗೊಂಡಿದೆ’ ಎಂದು ವ್ಯಕ್ತಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.