ADVERTISEMENT

75 ವರ್ಷಗಳ ಹಿಂದೆ ಈ ದಿನ: ಮೊಬೈಲ್‌ ಬ್ಯಾಂಕಿಂಗ್‌ ಯೋಜನೆ

ಪ್ರಜಾವಾಣಿ ವಿಶೇಷ
Published 17 ಆಗಸ್ಟ್ 2025, 19:42 IST
Last Updated 17 ಆಗಸ್ಟ್ 2025, 19:42 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

ಮೊಬೈಲ್‌ ಬ್ಯಾಂಕಿಂಗ್‌ ಯೋಜನೆ ಕುರಿತು ಅರ್ಥ ಸಚಿವ ದೇಶಮುಖ್‌

ನವದೆಹಲಿ, ಆಗಸ್ಟ್ 17– ಗ್ರಾಮಾಂತರ ಉಳಿತಾಯಗಳನ್ನು ಸರಿಯಾದ ರೀತಿಯಲ್ಲಿ ಆಕರ್ಷಿಸಲ್ಪಡುವುದು ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಬಹುಮುಖ್ಯ. ಇದು ಅಭಿವೃದ್ಧಿ ಯೋಜನೆಗಳ ಮೇಲೆ ಮಹತ್ತರ ಪರಿಣಾಮವನ್ನು ಉಂಟು ಮಾಡುವುದು. ಇದನ್ನೇ ಯೋಜನಾ ಸಮಿತಿಯ ನನ್ನ ಸಹೋದ್ಯೋಗಿಗಳು ತಮ್ಮ ಪರಿಶೀಲನೆಯಲ್ಲಿ ಕಂಡು ಹಿಡಿದಿದ್ದಾರೆ ಎಂಬುದಾಗಿ ಅರ್ಥ ಸಚಿವ ಸಿ.ಡಿ. ದೇಶಮುಖ್‌ ಅವರು ಪಾಟಿಯಾಲಾ ಬ್ಯಾಂಕಿನ ಸಮಾರಂಭದಲ್ಲಿ ತಿಳಿಸಿದರು. 

ADVERTISEMENT

ಬಿಜಾಪುರ ಜಿಲ್ಲೆಯಲ್ಲಿ ಕ್ಷಾಮ?

ಮುಂಬೈ, ಆಗಸ್ಟ್‌ 17– ಮುಂಬೈ ಸಂಸ್ಥಾನದ ಕಣಜಗಳಲ್ಲೊಂದೆನಿಸಿದ ಬಿಜಾಪುರ ಕ್ಷಾಮದ ಹಾದಿಯಲ್ಲಿದೆ ಎಂದು ಇಲ್ಲಿಗೆ ಬಂದಿರುವ ವರದಿಗಳಿಂದ ಗೊತ್ತಾಗುತ್ತದೆ.

20 ಲಕ್ಷ ಎಕರೆಗಳಲ್ಲಿ ಖಾರೀಫ್‌ ಬೆಳೆ ನಾಶವಾಗಿದೆಯೆಂದು ಇಲ್ಲಿಗೆ ಅಧಿಕೃತ ವರದಿ ಬಂದಿದೆ. ಬಿತ್ತಿದ ‘ರಾಬಿ’ ಬೆಳೆ ಕೂಡ ಬೆಳೆಯುತ್ತಿಲ್ಲ. ಜಿಲ್ಲೆಯಲ್ಲಿ ಸುತ್ತಮುತ್ತಲೂ ದನಗಳ ಮೇವಂತೂ ವಿಷಮ ಅಭಾವ ಪರಿಸ್ಥಿತಿಯನ್ನು ಮುಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.