ADVERTISEMENT

75 ವರ್ಷಗಳ ಹಿಂದೆ: ಶಾಂತಿಯುತವಾಗಿ ನೇಪಾಳದ ಬಿಕ್ಕಟ್ಟು ಪರಿಹಾರವಾಗಬೇಕು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 23:58 IST
Last Updated 19 ನವೆಂಬರ್ 2025, 23:58 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

‘ಶಾಂತಿಯುತವಾಗಿ ನೇಪಾಳದ ಬಿಕ್ಕಟ್ಟು ಪರಿಹಾರವಾಗಬೇಕು’

ನವದೆಹಲಿ, ನ. 19– ‘ನೇಪಾಳದಲ್ಲಿ ಅಂತಃಕಲಹವನ್ನು ಪರಿಹರಿಸಲು ಕೂಡಲೇ ರಾಜಕೀಯ ಹಾಗೂ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವುದೊಂದೇ ಮಾರ್ಗ’ ಎಂದು ಭಾರತ ಸರ್ಕಾರದ ವಿದ್ಯಾ ಸಚಿವ ಮೌಲಾನಾ ಅಬುಲ್‌ ಕಲಾಂ ಅಜಾದರು ಇಲ್ಲಿ ತಿಳಿಸಿದರು.

ADVERTISEMENT

ನೇಪಾಳದ ಒಳ ವ್ಯವಹಾರದಲ್ಲಿ ನಾವು ಮಧ್ಯ ಪ್ರವೇಶಿಸುವುದಕ್ಕೆ ಆ‌ಗದಾದರೂ ಅಲ್ಲಿ ಎದ್ದಿರುವ ಅತೃಪ್ತಿಯನ್ನು ನಾವು ಗಮನಿಸಬೇಕು. ನೇಪಾಳವು ಭಾರತದ ನೆರೆಯ ರಾಷ್ಟ್ರ. ಆದ್ದರಿಂದ ಅಲ್ಲಿನ ಬಿಕ್ಕಟ್ಟು ಭಾರತದ ಸ್ವಾತಂತ್ರ್ಯಕ್ಕೆ ಅಪಾಯ ತರಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.