ADVERTISEMENT

75 ವರ್ಷಗಳ ಹಿಂದೆ ಈ ದಿನ: ರಾಷ್ಟ್ರೀಯತೆ ಸಾಮಾಜಿಕ ಪರಿವರ್ತನೆಯ ಒಡನಾಡಿ– ನೆಹರೂ

ಪ್ರಜಾವಾಣಿ ವಿಶೇಷ
Published 17 ಜೂನ್ 2025, 19:17 IST
Last Updated 17 ಜೂನ್ 2025, 19:17 IST
   

ರಾಷ್ಟ್ರೀಯತೆ ಸಾಮಾಜಿಕ ಪರಿವರ್ತನೆಯ ನಿಕಟ ಒಡನಾಡಿ

ಸಿಂಗಪುರ, ಜೂನ್ 17– ‘ನೆಲಸು ನಾಡಿನ ಪದ್ಧತಿಯಿಂದು ತೀರಾ ಬಿಗಿ ತಪ್ಪಿದೆ. ಕೊನೆಗೆ ಈ ಪದ್ಧತಿಯ ನಾಮಾವಶೇಷವಾಗುವುದರಲ್ಲಿ ಸಂಶಯವಿಲ್ಲ. ಸಾಮಾಜಿಕ ಪರಿವರ್ತನೆಯೊಡನೆ ಹೊಂದಿಕೊಂಡು ಬಂದಿರುವ ಮಹತ್ತರ ಶಕ್ತಿಯೆಂದರೆ ರಾಷ್ಟ್ರೀಯತೆಯ ಮಹಾಶಕ್ತಿ. ಕಮ್ಯುನಿಸಂ ರಾಷ್ಟ್ರೀಯತೆಯಿಂದ ಪೂರ್ಣ ಪ್ರತ್ಯೇಕವಾದುದಲ್ಲದೆ ರಾಷ್ಟ್ರೀಯತೆಯನ್ನೂ ವಿರೋಧಿಸಿದುದರಿಂದ ಅದು ಬಲಗುಂದಬೇಕಾಯಿತು’ ಎಂಬುದಾಗಿ ಪಂಡಿತ ನೆಹರೂ ಅವರು, ಸಿಂಗಪುರದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT