ADVERTISEMENT

75 ವರ್ಷಗಳ ಹಿಂದೆ ಈ ದಿನ: ಹಟಕ್ಕೆ ಸೂಜಿ ನುಂಗಿದ!

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 19:27 IST
Last Updated 19 ಜೂನ್ 2025, 19:27 IST
   

ಮದರಾಸ್‌, ಜೂನ್‌ 19– ಹೊಟ್ಟೆ ನೋವೆಂದು ಆಸ್ಪತ್ರೆಗೆ ಬಂದು ಸೇರಿದ ಮನುಷ್ಯನೊಬ್ಬನ ಎಕ್ಸ್‌ರೇ ಚಿತ್ರ ತೆಗೆದಾಗ ಆತನ ಕರುಳು ಮತ್ತು ಉದರದಲ್ಲಿ 25–30 ಹೊಲಿಗೆ ಸೂಜಿಗಳು ಕಂಡುಬಂದವು. ಒಂದು ವಾರದಲ್ಲಿ ಆತ 20 ಸೂಜಿಗಳನ್ನು ವಾಂತಿ ಮಾಡಿದ್ದರೂ ಇನ್ನೂ ಕೆಲವು ಕರುಳಿಗೆ ಚುಚ್ಚಿಕೊಂಡಿವೆಯಂತೆ.

ಮ್ಯಾಜಿಸ್ಟ್ರೇಟರ ಮುಂದೆ ಆತ ಮರಣ ಹೇಳಿಕೆ ಕೊಡುತ್ತಾ, ಜೂನ್‌ 16ನೇ ತಾರೀಕು ಒಬ್ಬನೊಂದಿಗೆ ಆತ ತೋರಿಸಿದ ನಾಲ್ಕು ಸುಲಿದ ಇಡೀ ಬಾಳೆ ಹಣ್ಣುಗಳನ್ನು ಅಗಿಯದೆ ನುಂಗುವುದಾಗಿ ಪಣ ತೊಟ್ಟು, ನಾಲ್ಕನೆಯದನು ನುಂಗುವಾಗ ಸೂಜಿ ಗಂಟಲಿಗೆ ಚುಚ್ಚಿತೆಂದೂ, ಆಗ ತನಗೆ ಮೋಸ ಮಾಡಲಾಗಿದೆ
ಎಂಬ ಭಾವನೆ ಬಂದು ಕೂಡಲೇ ತಾನು ಆಸ್ಪತ್ರೆ ಸೇರಿದ್ದಾಗಿ ತಿಳಿಸಿದ್ದಾನೆ. ಪೊಲೀಸರು ಕೊಲೆ ಆಪಾದನೆ ಮೊಕದ್ದಮೆ ದಾಖಲೆ ಮಾಡಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT