75 ವರ್ಷಗಳ ಹಿಂದೆ
ಸಕ್ಕರೆ ಪಡಿತರ ಪ್ರಮಾಣ ಕಡಿಮೆ?
ಬೆಂಗಳೂರು, ಆಗಸ್ಟ್ 22– ಸಕ್ಕರೆ ಆಮದು ಪರಿಸ್ಥಿತಿ ಆಶಾದಾಯಕವಾಗಿಲ್ಲದಿರುವುದರಿಂದ ಈಗ ಇರುವಷ್ಟು ಸಕ್ಕರೆಯನ್ನು ಹೆಚ್ಚು ದಿನ ಬರುವಂತೆ ಮಾಡಲು ಹಾಲಿ ಇರುವ ಸಕ್ಕರೆ ಪಡಿತರ ಪ್ರಮಾಣದಲ್ಲಿ ವ್ಯತ್ಯಾಸ ಮಾಡುವುದನ್ನು ಜಾಗರೂಕತೆಯಿಂದ ಪುನರ್ ಪರಿಶೀಲಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಕೆ. ಚೆಂಗಲರಾಯರೆಡ್ಡಿ ಅವರು, ಇಂದು ಪತ್ರಿಕಾ ಪ್ರತಿನಿಧಿಗಳೊಡನೆ ಮಾತನಾಡುತ್ತಾ ತಿಳಿಸಿದರು.
ಬೆಂಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗೆ ಸೋಲು
ಬೆಂಗಳೂರು, ಆಗಸ್ಟ್ 22– ಶಾಸನಸಭೆಯ ಉಪ ಚುನಾವಣೆಗಳಲ್ಲಿ ಬೆಂಗಳೂರು ಜಿಲ್ಲೆಯಿಂದ ಚೆನ್ನಬೈರೇಗೌಡರು ಚುನಾಯಿತರಾಗಿದ್ದಾರೆ. ಅವರಿಗೆ 3,778 ಓಟುಗಳೂ, ಕಾಂಗ್ರೆಸ್ ಪಕ್ಷದ ಉಮೇದುದಾರರಾಗಿ ನಿಂತಿದ್ದ ಕೆ.ರಾಮಯ್ಯರೆಡ್ಡಿ ಅವರಿಗೆ 2,641 ಓಟುಗಳು ಬಂದಿವೆ. ಕುಲಗೆಟ್ಟ ಓಟುಗಳು 214.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.