
ಪ್ರಜಾವಾಣಿ ವಿಶೇಷ
75 ವರ್ಷಗಳ ಹಿಂದೆ ಈ ದಿನ
ಆಮದು ಹತೋಟಿ ವಿಚಾರಣಾ ಸಮಿತಿಯ ಸೂಚನೆ ಅಂಗೀಕೃತ
ದೆಹಲಿ, ಜ. 4– ಆಮದು ಹತೋಟಿ ವಿಚಾರಣಾ ಸಮಿತಿಯವರು ಕಳೆದ ಅಕ್ಟೋಬರ್‌ನಲ್ಲಿ ಸಲ್ಲಿಸಿದ ವರದಿಯಲ್ಲಿ ಪ್ರಸ್ತಾಪಿಸಿರುವ ಸೂಚನೆಗಳಲ್ಲಿ ಬಹುಭಾಗವನ್ನು ಭಾರತ ಸರ್ಕಾರ ಅಂಗೀಕರಿಸಿರುವುದಾಗಿ ಕೇಂದ್ರ ಸರ್ಕಾರದಿಂದ ಅಂಗೀಕೃತವಾದ ನಿರ್ಣಯವೊಂದು ತಿಳಿಸುತ್ತದೆ.
ಹೀಗೆ ಅಂಗೀಕರಿಸಲಾಗಿರುವ ಸೂಚನೆಗಳಲ್ಲಿ ಕೆಲವನ್ನು 1950ರ ಜನವರಿ 1ರಿಂದಲೂ ಮತ್ತೆ ಕೆಲವನ್ನು ಜುಲೈ 1ರಿಂದಲೂ ಕಾರ್ಯಗತ ಮಾಡಲಾಗುವುದು.
ಯೋಜನಾ ಪಂಚಾಯಿತಿಯ ಸದಸ್ಯ ಜಿ.ಎಲ್. ಮೆಹತಾರ ಅಧ್ಯಕ್ಷತೆಯಲ್ಲಿ ಕಳೆದ ಜುಲೈ ತಿಂಗಳಲ್ಲಿ ನೇಮಿತವಾದ ಈ ಸಮಿತಿಯಲ್ಲಿ ತುಳಸೀದಾಸ್ ಕಿಲಾಚಂದ್ ಮತ್ತು ಡಿ.ಎಲ್. ಮಜೂಂದಾರ್ ಸದಸ್ಯರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.