75 ವರ್ಷಗಳ ಹಿಂದೆ
ಕಾನ್‌ಪುರ, ಜುಲೈ 2– ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಆಚಾರ್ಯ ಜೆ.ಬಿ. ಕೃಪಲಾನಿ ಅವರು ಈ ದಿನ ‘ಸ್ವರಾಜ್ಯ ಆಶ್ರಮ’ದ ಆರಂಭೋತ್ಸವ ಮಾಡುತ್ತ, ಜನತೆ ಗಾಂಧೀ ಮಾರ್ಗವನ್ನು ಅನುಸರಿಸಬೇಕು. ಅದೊಂದೇ ಮುಕ್ತಿ ಪಥ ತೋರಬಲ್ಲದು ಎಂಬುದಾಗಿ ಮನವಿ ಮಾಡಿಕೊಂಡರು.
ಮುಂದುವರಿದು, ಕಾಂಗ್ರೆಸ್ ಸಂಸ್ಥೆಯೂ, ಕಾಂಗ್ರೆಸ್ ಸರ್ಕಾರಗಳೂ ಮಹಾತ್ಮ ಗಾಂಧೀಯವರು ಹಾಕಿಕೊಟ್ಟಿರುವಹಾದಿಯನ್ನು ಬಿಟ್ಟು ‘ರಾಜಕೀಯ ಪ್ರದರ್ಶನಗಳನ್ನು ಕೈಗೊಂಡಿರುವುದೇ ಇಂದಿನ ಕಷ್ಟಗಳಿಗೂ, ಅಶಾಂತಿಗೂ ಕಾರಣ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.