ADVERTISEMENT

75 ವರ್ಷಗಳ ಹಿಂದೆ: ಬಂಗಾಳದ ಬಗ್ಗೆ ವಿಲಕ್ಷಣ ವಾದ ವಿನಾಶಕಾರಕ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 22:48 IST
Last Updated 9 ಆಗಸ್ಟ್ 2025, 22:48 IST
<div class="paragraphs"><p>75 ವರ್ಷಗಳ ಹಿಂದೆ</p></div>

75 ವರ್ಷಗಳ ಹಿಂದೆ

   

ದೆಹಲಿ ಆಗಸ್ಟ್‌ 9– ‘ಬಂಗಾಳ ಸಮಸ್ಯೆಯ ಪರಿಹಾರಕ್ಕೆ ವಿಭಜನೆಯನ್ನು ರದ್ದುಗೊಳಿಸಬೇಕು. ಪಾಕಿಸ್ತಾನವು ಭಾರತಕ್ಕೆ ಭೂ ಪ್ರದೇಶವನ್ನು ಬಿಟ್ಟುಕೊಡಬೇಕು. ಪ್ರಜೆಗಳ ವರ್ಗಾವಣೆ ನಡೆಯಬೇಕು ಎಂಬ ಸಲಹೆ, ಉನ್ಮದಾವಸ್ಥೆಯಿಂದ ಕೂಡಿದ ವಾದ ಮಾತ್ರವಲ್ಲದೇ, ಈ ಸಲಹೆ ಗಳನ್ನು ಒಪ್ಪಿಕೊಳ್ಳುವುದಾದರೆ ರಾಷ್ಟ್ರ ಹೇತುವೊಂದೇ ಅಲ್ಲದೆ ಯಾವ ಉದಾತ್ತ ತತ್ವಕ್ಕಾಗಿ ಹೋರಾಡಿ, ಯಾವ ತತ್ವದ ಮೇಲೆ ನಿಂತಿದೇವೆಯೋ ಆ ತತ್ವೋದ್ದೇಶ ಪೂರ್ಣ ಮಣ್ಣು ಗೂಡಿದಂತೆಯೇ ಸರಿ’ ಎಂದು ಪ್ರಧಾನಿ ಪಂಡಿತ್‌ ನೆಹರೂರವರು ಪಾರ್ಲಿಮೆಂಟಿನಲ್ಲಿ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT