75 ವರ್ಷಗಳ ಹಿಂದೆ
ಸರ್ಕಾರಿ ರಹಸ್ಯ ಪರಿಪತ್ರದ ಅರಿವಿಲ್ಲದ ಪ್ರಕಟಣೆ ಅಪರಾಧವಲ್ಲ
ಬೊಂಬಾಯಿ, ಜುಲೈ 15– ‘ರ‍್ಯಾಡಿಕಲ್ ಹ್ಯೂಮನಿಸ್ಟ್’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ವಿ.ಬಿ. ಕರ್ಣಿಕ್ ಹಾಗೂ ಪ್ರಕಾಶಕರಾದ ಮಿಸ್. ಮಣಿಬೆನ್ ಕಾರಾರವರು ರಹಸ್ಯ ಸರ್ಕಾರಿ ಪರಿಪತ್ರ (ಸರ್ಕ್ಯುಲರ್) ಒಂದನ್ನು ಪ್ರಕಟಿಸಿದರೆಂಬ ಆರೋಪದ ಮೇಲೆ ಹೂಡಲಾಗಿದ್ದ ಮೊಕದ್ದಮೆಯಲ್ಲಿ ಮುಂಬೈನ ಪ್ರಮುಖ ಪ್ರೆಸಿಡೆನ್ಸಿ ನ್ಯಾಯಧೀಶರು, ವಿಚಾರಣೆ ನಡೆಸಿ ಅವರು ತಪ್ಪಿತಸ್ಥರಲ್ಲವೆಂದು ತೀರ್ಪಿತ್ತರು.
‘ರ‍್ಯಾಡಿಕಲ್ ಹ್ಯೂಮನಿಸ್ಟ್’ ಪತ್ರಿಕೆಯ ಸಂಪಾದಕರಾದ ಎಂ.ಎನ್. ರಾಯ್ ಅವರ ಮೇಲೂ ಇದೇ ಆರೋಪ ಹೊರಿಸಿ ಮೊಕದ್ದಮೆ ಹೂಡಲಾಗಿದೆ. ಅವರಿಗೆ ಇನ್ನೂ ‘ಸಮನ್ಸ್’ ತಲುಪಿಲ್ಲವಾದ್ದರಿಂದ ಅವರ ವಿಚಾರಣೆಯನ್ನು ಪ್ರತ್ಯೇಕವಾಗಿ ನಡೆಸಲಾಗುವುದು ಎಂದು ತಿಳಿದುಬಂದಿದೆ.
ರಾಜಾಜಿ ಕೇಂದ್ರದ ಖಾತೆ ಇಲ್ಲದ ಮಂತ್ರಿ
ನವದೆಹಲಿ, ಜುಲೈ 15– ಕೇಂದ್ರ ಸಂಪುಟದ ಸಚಿವರಾಗಿ ನೇಮಕವಾಗಿರುವ ಸಿ. ರಾಜಗೋಪಾಲಾಚಾರಿಯವರು ಇಂದು ಖಾತೆಯಿಲ್ಲದ ಮಂತ್ರಿಯಾಗಿ ತಮ್ಮ ಅಧಿಕಾರ ಸ್ವೀಕರಿಸಿದರೆಂದು ಸಂಪುಟದ ಸೆಕ್ರೆಟೇರಿಯಟ್ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.