ADVERTISEMENT

75 ವರ್ಷಗಳ ಹಿಂದೆ | ಸಾಧುಗಳ ಕದನ ಕುತೂಹಲ!

ಸೋಮವಾರ 17–7–1950

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 0:30 IST
Last Updated 17 ಜುಲೈ 2025, 0:30 IST
<div class="paragraphs"><p>75 ವರ್ಷಗಳ ಹಿಂದೆ</p></div>

75 ವರ್ಷಗಳ ಹಿಂದೆ

   

ಸಾಧುಗಳ ಕದನ ಕುತೂಹಲ!

ಕಾಶಿ, ಜುಲೈ 16– ನಿನ್ನೆ ಸಂಜೆ ಸ್ಥಳೀಯ ಪೌರಸಭಾ ಭವನದ ಆಸ್ತಿಯೊಂದರ ಬಗ್ಗೆ ತಮ್ಮ ಹಕ್ಕು ಸ್ಥಾಪಿಸಲು ಬಂದಿದ್ದ ಇಬ್ಬರು ‘ಸಾಧು’ಗಳಿಗೆ ಕಲಹವಾಗಿ ಒಬ್ಬ ಇನ್ನೊಬ್ಬನ ಮೂಗನ್ನು ಕಚ್ಚಿಬಿಟ್ಟ. ಈ ಸಾಧುಗಳ ಹಿಂದೆ ಬಂದಿದ್ದ ಅನುಯಾಯಿಗಳಿಗೂ ಪರಸ್ಪರ ಹೊಡೆದಾಟವಾಯಿತು.

ADVERTISEMENT

ಆ ನಂತರ ಪೊಲೀಸರು ಒಬ್ಬ ಸಾಧುವನ್ನು ಬಂಧಿಸಿ, ಮತ್ತೊಬ್ಬನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳಿಸಿದರು.

120 ವರ್ಷದ ಜೀವಂತ ವೃದ್ಧ

ಜೋಹನ್ಸ್‌ಬರ್ಗ್‌, ಜುಲೈ 16– ದಕ್ಷಿಣ ಆಫ್ರಿಕಾದ ವಯೋವೃದ್ಧ ಪೀಟರ್ ಎಂಬಾತನಿಗೆ ನಾಳೆ 120ನೇ ವರ್ಷದ ಹುಟ್ಟಿದ ಹಬ್ಬ.

ಜೋಹನ್ಸ್‌ಬರ್ಗ್‌ ನಗರಕ್ಕೆ 10 ಮೈಲಿ ಪೂರ್ವದಲ್ಲಿರುವ ಜೆರ್ಮಿಸ್ಟನ್‌ನಲ್ಲಿ ವಾಸಿಸುತ್ತಿರುವ ಬಹಳ ಹಳೆಯ ವಲಸೆ ನಿವಾಸಿಯಾದ ಈತನನ್ನು ಪ್ರಶ್ನಿಸಿದಾಗ ‘ವಿಚಿತ್ರವೇನೂ ಇಲ್ಲ’ ಎಂದು ಉತ್ತರಿಸಿದ. ಹುಟ್ಟಿದ್ದು ಕೇಪ್‌ಟೌನ್‌ ಪ್ರಾಂತ್ರ್ಯದಲ್ಲಿ. ಈತನ ತಂದೆ, ಯಾಯಿ ಸ್ಕಾಟ್‌ಲೆಂಡಿನಿಂದ ಬಂದವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.