
ಪ್ರಜಾವಾಣಿ ವಿಶೇಷ
75 ವರ್ಷಗಳ ಹಿಂದೆ ಈ ದಿನ
ಸತ್ತ ಮೇಲೂ ಚರ್ಚಿಗೆ ತಲೆಬಾಗದ ಬರ್ನಾಡ್ ಷಾ
ಲಂಡನ್, ನ. 25– ಜಾರ್ಜ್ ಬರ್ನಾಡ್ ಷಾರವರ ಮರಣ ಶಾಸನದಲ್ಲಿ 8 ಸಾವಿರ ಮಾತುಗಳಿವೆ. ಅವರ ಮಹಾ ಸಂಪತ್ತಿನ ಮೇಲೆ ಬೀಳಬಹುದಾದ ತೆರಿಗೆಗಳ ಸಮಸ್ಯೆಯ ತೊಡಕಿನಲ್ಲಿ ಧರ್ಮದರ್ಶಿಗಳು ಬಿದ್ದಿರುವುದರಿಂದ ಈ ಶಾಸನ ಬಹಿರಂಗವಾಗಿ ಪ್ರಕಟವಾಗಬೇಕಾದರೆ ಇನ್ನೂ ಕೆಲವು ತಿಂಗಳಾಗಬಹುದೆಂದು ಬಗೆಯಲಾಗಿದೆ.
ಇಂದು ಬಿಡುಗಡೆಯಾದ ಮರಣ ಶಾಸನದಲ್ಲಿ, ‘ಕ್ರಿಯಾತ್ಮಕ ಪರಿಣಾಮ ವಾದವೇ ನನ್ನ ಧಾರ್ಮಿಕ ಹಾಗೂ ವೈಜ್ಞಾನಿಕ ನಂಬುಗೆಗಳೆಂದು ಹೇಳಬಹುದಾದುದರಿಂದ ನಾನು ವ್ಯವಸ್ಥಿತ ಚರ್ಚಿನ ಪದ್ಧತಿಗಳನ್ನು ಒಪ್ಪಿಕೊಂಡೆನೆಂದು ಸೂಚಿಸುವಂಥ ಯಾವುದೇ ಸ್ಮಾರಕವನ್ನೂ ನನಗೆ ರಚಿಸಬಾರದು ಮತ್ತು ಚಿತ್ರಹಿಂಸೆಯ ಅಥವಾ ರಕ್ತ ಬಲಿಯ ಸೂಚಕವಾಗಬಹುದಾದ ಶಿಲುಬೆಯ ಅಥವಾ ಯಾವುದೇ ರೀತಿಯಲ್ಲಿ ರೂಪಗೊಳಿಸಬಾರದು’ ಎಂದು ಷಾ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.