75 ವರ್ಷಗಳ ಹಿಂದೆ ಈ ದಿನ
ಗಂಡಂದಿರು ಬೇಕು!
ಜಲಂಧರ್, ಆಗಸ್ಟ್ 18– ವಿದ್ಯಾವಂತ, ಸುಸಂಸ್ಕೃತ ವಿವಾಹ ವಯಸ್ಕರಾದ ಅನೇಕ ಮಂದಿ ತರುಣಿಯರಿಗೆ ಒಳ್ಳೆಯ ಗಂಡಂದಿರನ್ನು ಹುಡುಕುವ ಕಾರ್ಯವನ್ನು ಪಂಜಾಬ್‌ನ ಪುನರ್ ವ್ಯವಸ್ಥಾ ಶಾಖೆ ಕೈಗೊಂಡಿದೆ.
ಸರ್ಕಾರಿ ಆಡಳಿತದಲ್ಲಿರುವ ಸ್ತ್ರೀಯರ ಗೃಹಗಳಲ್ಲಿ ವಾಸಿಸುತ್ತಿರುವ ಸ್ಥಾನ ಪಲ್ಲಟರಾದ ವಿಧವೆಯರ ಮಕ್ಕಳು, ಈ ತರುಣಿಯರು.
ಈ ಹುಡುಗಿಯರನ್ನು ವಿವಾಹವಾಗಲು ಮನಸ್ಸುಳ್ಳ ಜೀವನಾಧಾರವುಳ್ಳ ವಿದ್ಯಾವಂತರಾದ 25ರಿಂದ 30 ವಯಸ್ಸಿನ ಒಳಗಿರುವ ಯೋಗ್ಯ ತರುಣರ ಅರ್ಜಿಗಳನ್ನು ಜಲಂಧರದ ಪುನರ್ ವ್ಯವಸ್ಥಾ ಶಾಖೆಯ ಸ್ತ್ರೀ ವಿಭಾಗದ ನಿರ್ದೇಶಕರು ಬಯಸಿದ್ದಾರೆ.
ಚಿಕಾಗೋದಲ್ಲಿ ‘ವರ್ಣ ಗಲಭೆ’
ಚಿಕಾಗೋ, ಆಗಸ್ಟ್ 18– ನಿಗ್ರೋ ಕುಟುಂಬಗಳೆರಡು ಶ್ವೇತ ವರ್ಣೀಯರ ಕ್ಷೇತ್ರಕ್ಕೆ ಬಂದು ಬಿಡಾರ ಹೂಡಿದ್ದರಿಂದ ಚಿಕಾಗೋದಲ್ಲಿ ‘ವರ್ಣ ಗಲಭೆ’ ಉದ್ಘುತವಾಗಿ, 200 ಮಂದಿ ಪೊಲೀಸರು ಬಂದು ಅಡಗಿಸಬೇಕಾಯಿತು. 6 ಮಂದಿ ಶ್ವೇತ ವರ್ಣೀಯರ ಬಂಧನವಾಗಿದೆ. ನಿಗ್ರೋಗಳ ಮನೆಗಳ ಮೇಲೆ ಇಟ್ಟಿಗೆಗಳನ್ನು ಸೀಸೆಗಳನ್ನು ಎಸೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.