75 ವರ್ಷಗಳ ಹಿಂದೆ ಈ ದಿನ
ದಕ್ಷಿಣ ಮತ್ತು ಉತ್ತರ ಕೊರಿಯಾಗಳ ನಡುವೆ ಯುದ್ಧಾರಂಭ
ಸೆವೌಲ್ (ದಕ್ಷಿಣ ಕೊರಿಯಾ), ಜೂನ್ 25: ರಷ್ಯಾದ ಬೆಂಬಲ ಪಡೆದ ಉತ್ತರ ಕೊರಿಯಾವು ಇಂದು ಬೆಳಿಗ್ಗೆ ದಕ್ಷಿಣ ಕೊರಿಯಾದ ಮೇಲೆ ಯುದ್ಧ ಘೋಷಿಸಿತು. ಇಂದು ಸೂರ್ಯೋದಯ ಸಮಯದಲ್ಲಿ ಎಲ್ಲೆಯನ್ನು ದಾಟಿ ಯುದ್ಧವಾರಂಭಿಸಿದ ಉತ್ತರ ಕೊರಿಯಾ ಸೇನಾಪಡೆಗಳು ಇಮ್‌ಜಿನ್ ನದಿಯ ಪಶ್ಚಿಮ ದಿಗ್ಭಾಗದ ಪ್ರದೇಶವೆಲ್ಲವನ್ನೂ ಆಕ್ರಮಿಸಿರುವುದಾಗಿ ಅಮೆರಿಕಾದ ಸೇನಾ ಪ್ರವೀಣರು ವರದಿ ಮಾಡಿದ್ದಾರೆ.
ಇಂದು ಸಂಜೆಯ ಹೊತ್ತಿಗೆ ದಕ್ಷಿಣ ಕೊರಿಯಾ ಪಡೆಗಳು, ತಮ್ಮ ರಾಜಧಾನಿಯಾದ ಸೆವೌಲ್ ನಗರಗಳನ್ನು ರಕ್ಷಿಸಿಕೊಳ್ಳಲು ಸಹಾಯಕವಾಗಿರುವ, ನದಿತೀರ ಪ್ರದೇಶವನ್ನು ಉಳಿಸಿಕೊಳ್ಳುವ ಆಶೆಯಿಂದ ಉತ್ತರ ಕೊರಿಯಾದ ಪ್ರಬಲವಾದ ಪಡೆಗಳೊಡನೆ ಹೋರಾಡುತ್ತಿದ್ದವು.
ದಕ್ಷಿಣ ಕೊರಿಯಾ ರಾಜಧಾನಿ ಸೆವೌಲ್‌ಗೆ 25 ಮೈಲಿ ದೂರದಲ್ಲಿರುವ ಇನ್‌ಜಿನ್ ನದಿಯನ್ನು ದಕ್ಷಿಣ ಕೊರಿಯನ್ನರು ಸುಸಜ್ಜಿತ ಶಸ್ತ್ರಾಸ್ತ್ರ ಹೋರಾಟವನ್ನೆದುರಿಸಿ ತಮ್ಮ ವಶದಲ್ಲೇ ಇಟ್ಟುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.