
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಆಧುನಿಕ ಕ್ರಾಂತಿ ಸಾಹಿತಿ ಜಾರ್ಜ್ ಬರ್ನಾಡ್ ಷಾ ನಿಧನ
ಅಯಾಟ್–ಸೇಂಟ್ ಲಾರೆನ್ಸ್, ನ. 2– ವಿಲಿಯಂ ಷೇಕ್ಸ್‌ಪಿಯರ್ ನಂತರ ಅತ್ಯಂತ ಪ್ರಸಿದ್ಧ ನಾಟಕಕಾರರಾದ ಜಾರ್ಜ್ ಬರ್ನಾಡ್ ಷಾ ಅವರು, ಈ ದಿನ ಬೆಳಗಿನ ಜಾವ 4 ಗಂಟೆ 59 ನಿಮಿಷಕ್ಕೆ (ಗ್ರೀನ್‌ವಿಚ್ ಕಾಲಮಾನ) ತಮ್ಮ ಗೃಹದಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಕ್ರಿಮಿಯಾ ಯುದ್ಧಕಾಲದ 1856ರಲ್ಲಿ ಜನಿಸಿದ, ‘ಜಿಬಿಎಸ್’ ಅಣುಬಾಂಬಿನ ನಮ್ಮ ಕಾಲದವರೆಗೂ ಜೀವಿಸಿದ್ದ ಬರ್ನಾಡ್ ಷಾ ಈ ಸುದೀರ್ಘ ಕಾಲದಲ್ಲಿ ಜೀವನದ ಅನೇಕ ಉಬ್ಬರವಿಳಿತಗಳನ್ನು ಎದುರಿಸಿ, ಗೆದ್ದು, ‘ಆಂಗ್ಲ ಸಾಹಿತ್ಯ ಋಷಿ’ ಎನಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.