ADVERTISEMENT

ಭಾರತದ ಐಶ್ವರ್ಯಾ ರೈ ಈಗ ವಿಶ್ವ ಸುಂದರಿ | ಭಾನುವಾರ, 20–11–1994

ಭಾನುವಾರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 18:32 IST
Last Updated 19 ನವೆಂಬರ್ 2019, 18:32 IST
ಐಶ್ವರ್ಯಾ ರೈ
ಐಶ್ವರ್ಯಾ ರೈ   

ಪ್ರಿಟೋರಿಯಾ, ನ. 19 (ಪಿಟಿಐ)– ಇಂದು ಇಲ್ಲಿನ ಸನ್‌ಸಿಟಿಯಲ್ಲಿ ಜರುಗಿದ 1994ನೇ ಸಾಲಿನ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತದ ಐಶ್ವರ್ಯಾ ರೈ ಅವರು ವಿಶ್ವಸುಂದರಿ (ಮಿಸ್‌ ವರ್ಲ್ಡ್) ಆಗಿ ಆಯ್ಕೆಯಾದರು.

ಎರಡನೇ ಹಾಗೂ ಮೂರನೇ ಸ್ಥಾನಗಳಿಗೆ ಕ್ರಮವಾಗಿ ದಕ್ಷಿಣ ಆಫ್ರಿಕಾ ಹಾಗೂ ವೆನಿಜುವೆಲಾ ಸುಂದರಿಯರು ಆಯ್ಕೆಯಾದರು. ಅಂತಿಮ ಸ್ಪರ್ಧೆಗೆ ಮೊದಲಿನ ಸುತ್ತಿನಲ್ಲಿ ರೈಗೆ ‘ಅತ್ಯಂತ ಕಾಂತಿಯುಕ್ತ ಮುಖದವಳು’ ಎಂಬ ಪ್ರಶಸ್ತಿಯೂ ದೊರೆಯಿತು.

ಮುಂಬೈನ ಮಾಡೆಲ್ ರೈ ಅವರು ‘ಭಾರತ ಸುಂದರಿ’ ಸ್ಪರ್ಧೆಯಲ್ಲಿ ಎರಡನೇ ಸ್ಥಾನ‍ಪ‍ಡೆದಿದ್ದರು.

ADVERTISEMENT
ಪ್ರಜಾವಾಣಿಯ 20–11–1994 ಸಂಚಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿ

ಕೇಸರಿ, ರಾಯ್ ರಾಜೀನಾಮೆ ಕೇಳಲು ಆಯೋಗಕ್ಕೆ ಹಕ್ಕಿಲ್ಲ

ಜಬಲ್‌ಪುರ (ಮಧ್ಯ ಪ್ರದೇಶ), ನ. 19 (ಪಿಟಿಐ)– ಕೇಂದ್ರ ಸಚಿವ ಸಂಪುಟದಿಂದ ಸೀತಾರಾಮ ಕೇಸರಿ ಹಾಗೂ ಕಲ್ಪನಾಥ ರಾಯ್‌ ಅವರ ರಾಜೀನಾಮೆ ಕೇಳುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಕಾಂಗೈ ವಕ್ತಾರ ವಿ.ಎನ್. ಗಾಡ್ಗೀಳ್ ಅವರು ಇಂದು ಇಲ್ಲಿ ಹೇಳಿದರು.

‘ಸಚಿವರನ್ನು ವಜಾ ಮಾಡಬೇಕು ಎಂದು ಆಗ್ರಹಪಡಿಸುವ ಮೂಲಕ ಚುನಾವಣಾ ಆಯೋಗವು ರಾಜಕಾರಣದ ಕಣವನ್ನು ಪ್ರವೇಶಿಸಿದಂತಾಗಿದೆ. ಅಲ್ಲದೆ ಸಂವಿಧಾನವು ತನಗೆ ನೀಡಿದಂತಹ ಅಧಿಕಾರ ಹಾಗೂ ಕಾರ್ಯಕ್ಷೇತ್ರದ ಮಿತಿಯನ್ನು ಮೀರಿ ಆಜ್ಞೆಯನ್ನು ಹೊರಡಿಸಿದಂತಾಗಿದೆ’‍ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.