
ಪ್ರಜಾವಾಣಿ ವಾರ್ತೆಲಂಡನ್, ಡಿ. 7– ರಷ್ಯದ ವಿಜ್ಞಾನಿಗಳು ಈಗ ಕೃತಕ ಬೆಳಕಿನಿಂದ ಹಣ್ಣು ಮತ್ತು ತರಕಾರಿಯನ್ನು ಬೆಳೆಯುವ ವಿಧಾನ ಕಂಡುಹಿಡಿದಿರುವರೆಂದು ಟಾಸ್ ಸುದ್ದಿ ತಿಳಿಸಿದೆ.
ಈ ವಿಧಾನದಿಂದ ಅನೇಕ ಹಣ್ಣುಹಂಪಲುಗಳನ್ನು ಸುಲಭವಾಗಿ ಬೆಳೆಯಬಹುದು. ವರ್ಷದ ಎಲ್ಲಾ ಕಾಲದಲ್ಲೂ, ಎಲ್ಲಾ ಮಾಸಗಳಲ್ಲೂ ಬೆಳೆಯುವುದೇ ಅಲ್ಲದೆ ಉತ್ತರಶೀತ ವಲಯಗಳಲ್ಲೂ ಈ ಹಣ್ಣುಗಳನ್ನು ಬೆಳೆಯಬಹುದು.
ಭಾರತಕ್ಕೆ ಸ್ಟರ್ಲಿಂಗ್ ಉಳಿತಾಯದ ಪಾವತಿ
ನವದೆಹಲಿ, ಡಿ. 7– ಬ್ರಿಟನ್ನು ಭಾರತಕ್ಕೆ ತೆರಬೇಕಾಗಿರುವ ಸ್ಟರ್ಲಿಂಗ್ ಉಳಿತಾಯದಲ್ಲಿ ವರ್ಷಕ್ಕೆ ಮೂರು ಕೋಟಿ ಐವತ್ತು ಲಕ್ಷ ಪೌಂಡುಗಳಂತೆ 1951ರ ಜುಲೈ 1ರಿಂದ 6 ವರ್ಷಗಳ ಕಾಲ ಭಾರತಕ್ಕೆ ಒದಗಿಸುವಂತೆ ಉಭಯ ರಾಷ್ಟ್ರಗಳ ನಡುವೆ ಒಪ್ಪಂದವಾಗಿದೆ ಎಂಬುದಾಗಿ ಭಾರತದ ಅರ್ಥ ಸಚಿವ ಚಿಂತಾಮಣಿ ದೇಶಮುಖ್ ಅವರು, ಇಂದು ಪಾರ್ಲಿಮೆಂಟಿನಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.