
ನವದೆಹಲಿ, ಡಿ. 7 (ಯುಎನ್‌ಐ)– ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಪ್ಪಿದರೆ ರಾಮಮಂದಿರ ಮತ್ತು ಮಸೀದಿಯನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಬಹುದಾಗಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಇಂದು ರಾತ್ರಿ ಇಲ್ಲಿ ಹೇಳಿದರು.
ಕೇಂದ್ರ ಸಚಿವ ಶಹನವಾಜ್ ಹುಸೇನ್ ಏರ್ಪಡಿಸಿದ್ದ ‘ಇಫ್ತಾರ್’ ಕೂಟದಲ್ಲಿ ಪಾಲ್ಗೊಂಡಿದ್ದ ಅವರು, ಅಯೋಧ್ಯೆ ಸಮಸ್ಯೆಗೆ ಎರಡು ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ನ್ಯಾಯಾಲಯದ ಮೂಲಕ ಅಥವಾ ಎರಡೂ ಸಮುದಾಯದವರು ಏಕಾಭಿಪ್ರಾಯದ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಕರಾವಳಿ ಪರಿಸರ: 1,062 ಕೋಟಿ ರೂ. ಯೋಜನೆ
ಬೆಂಗಳೂರು, ಡಿ. 7– ಕರಾವಳಿ ಪ್ರದೇಶದ ಹತ್ತು ನಗರ ಮತ್ತು ಪಟ್ಟಣಗಳ ಮೂಲಸೌಕರ್ಯದ ಅಭಿವೃದ್ಧಿಗಾಗಿ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮತ್ತು ರಾಜ್ಯ ಸರ್ಕಾರದ ಜಂಟಿ ಆಶ್ರಯದಲ್ಲಿ 1,062 ಕೋಟಿ ರೂಪಾಯಿ ವೆಚ್ಚದ ‘ಕರ್ನಾಟಕ ಕರಾವಳಿ ಪರಿಸರ ನಿರ್ವಹಣೆ ಯೋಜನೆ’ಯ ಅನುಷ್ಠಾನಕ್ಕೆ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.