ADVERTISEMENT

25 ವರ್ಷಗಳ ಹಿಂದೆ: ನ್ಯಾಯಮೂರ್ತಿಗೆ ಬಿಡಿಎ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 23:30 IST
Last Updated 25 ಸೆಪ್ಟೆಂಬರ್ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬೆಂಗಳೂರು, ಸೆ.25– ನಗರದ ಎಚ್‌ಎಸ್ಆರ್‌ (ಹೊಸೂರು–ಸರ್ಜಾಪುರ ರಸ್ತೆ) ಬಡಾವಣೆಯ 2ನೇ ಹಂತ ರಚನೆಗಾಗಿ ಭೂಸ್ವಾಧೀನ ಪಡೆಯಲು ಅಧಿಸೂಚನೆ ಹೊರಡಿಸಿರುವ ಅಗರ ಗ್ರಾಮದ ಸರ್ವೆ ನಂಬರ್‌ 6/1ರಲ್ಲಿ ಅನಧಿಕೃತವಾಗಿ ಪೆಟ್ರೋಲ್‌ ಬಂಕ್‌ ಸ್ಥಾಪಿಸಿರುವುದಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸದ್ಯ ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರಿಗೆ ಮತ್ತು ಇತರ ಮೂವರಿಗೆ ನೋಟಿಸ್‌ ಜಾರಿಗೊಳಿಸಿದೆ.

ಮೇಲಿನ ಸರ್ವೆ ನಂಬರ್‌ನಲ್ಲಿ ನಾಲ್ಕು ಎಕರೆ 25 ಗುಂಟೆ ಜಮೀನು ಇದೆ. ಇದು ಪ್ರಾಧಿಕಾರದ ಭೂಸ್ವಾಧೀನ ನಡವಳಿಕೆಗೆ ಒಳಪಟ್ಟಿದೆ. ಇದರಲ್ಲಿ 20 ಗುಂಟೆಯನ್ನು ಪೆಟ್ರೋಲ್ ಬಂಕ್ ಸ್ಥಾಪಿಸಲು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿರುವುದು ಕಾನೂನುಬಾಹಿರ ಎಂದು ಬಿಡಿಎ ಆಯುಕ್ತ ಜಯಕರ್ ಜರೋಮ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT