
ಬೆಂಗಳೂರು, ಡಿ. 26– ಬಿ.ಟಿ ತಂತ್ರಜ್ಞಾನ ಹತ್ತಿ ತಳಿಯ ವಾಣಿಜ್ಯ ಉತ್ಪಾದನೆಯನ್ನು ಮುಂದಿನ ವರ್ಷ ಆರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ಕೃಷಿ ಸಚಿವ ಟಿ.ಬಿ. ಜಯಚಂದ್ರ ಇಂದು ತಿಳಿಸಿದರು.
ಕರ್ನಾಟಕ ಕೃಷಿ ಆಯೋಗದ ವರದಿ ಸ್ವೀಕರಿಸಿದ ನಂತರ ಅವರು ಪತ್ರಕರ್ತರ ಜೊತೆ ಮಾತನಾಡುತ್ತಾ, ಈ ವರ್ಷ ಪರೀಕ್ಷಾರ್ಥ ಬೆಳೆ ಬೆಳೆಯಲು ಅನುಮತಿ ನೀಡಲಾಗಿದೆ. ಈ ಕಾರ್ಯಕ್ರಮದ ನಿಗಾವಹಿಸಿರುವ ವಿಶ್ವವಿದ್ಯಾಲಯದ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದರು.
ಪೊಲೀಸ್ ಕಾರ್ಯಾಚರಣೆಯಲ್ಲಿ ಉಗ್ರನ ಹತ್ಯೆ, ಒಬ್ಬನ ಬಂಧನ
ನವದೆಹಲಿ, ಡಿ. 26 (ಪಿಟಿಐ, ಯುಎನ್‌ಐ)– ಕೆಂಪುಕೋಟೆಯಲ್ಲಿ ಐದು ದಿನಗಳ ಹಿಂದೆ ನಡೆದ ಉಗ್ರಗಾಮಿಗಳ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಂದು ಬೆಳಗಿನ ಜಾವ ದಕ್ಷಿಣ ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ರಾಷ್ಟ್ರೀಯತೆ ಹೊಂದಿರುವ ಒಬ್ಬ ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಉಗ್ರಗಾಮಿಯೊಬ್ಬ ಗುಂಡಿಗೆ ಆಹುತಿಯಾಗಿದ್ದಾನೆ.