ಬೆಂಗಳೂರು, ಸೆ. 30– ಕೇಂದ್ರ ಸರ್ಕಾರವು ಡೀಸೆಲ್ ಮತ್ತಿತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಿದ ಹಿಂದೆಯೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು, ಮಂಗಳವಾರ ಮಧ್ಯರಾತ್ರಿ ಯಿಂದ (ಅ. 3) ಜಾರಿಗೆ ಬರುವಂತೆ ಶೇ 9ರಿಂದ 10ರಷ್ಟು ಪ್ರಯಾಣ ದರ ಏರಿಸಲು ನಿರ್ಧರಿಸಿದೆ.
ಸಾರಿಗೆ ಸಚಿವ ಸಗೀರ್ ಅಹ್ಮದ್ ಇಂದು ಸಂಜೆ ತುರ್ತು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಆಟೊರಿಕ್ಷಾ ಮತ್ತು ಖಾಸಗಿ ಬಸ್ ಪ್ರಯಾಣ ದರ ಏರಿಕೆ ಕುರಿತು ನಿರ್ಧರಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.
ಆದಾಯ ತೆರಿಗೆದಾರರಿಗೆ ಪಡಿತರ ಸಕ್ಕರೆ ಇಲ್ಲ
ಬೆಂಗಳೂರು, ಸೆ. 30– ಸುಮಾರು ಒಂಬತ್ತು ಲಕ್ಷ ಜನ ಆದಾಯ ತೆರಿಗೆದಾರರನ್ನು ಪಡಿತರ ಸಕ್ಕರೆ ವ್ಯಾಪ್ತಿಯಿಂದ ಹೊರಗಿಡಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆಗಳನ್ನು ನಡೆಸಿದ್ದು, ಅಕ್ಟೋಬರ್ ತಿಂಗಳ ಪಡಿತರದ ಜೊತೆಗೆ, ‘ನೀವು ಒಬ್ಬ ಆದಾಯ ತೆರಿಗೆ ಪಾವತಿದಾರರೇ?’ ಎಂಬ ನೋಟಿಸ್ ಜಾರಿಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.