75 ವರ್ಷಗಳ ಹಿಂದೆ
ನವದೆಹಲಿ, ಆಗಸ್ಟ್ 7– ಚಾಮರಾಜ ನಗರ ಮತ್ತು ಸತ್ಯಮಂಗಲಕ್ಕೆ ರೈಲ್ವೆ ಮಾರ್ಗ ಹಾಕಬೇಕೆಂಬ ಬಗ್ಗೆ ಹನುಮಂತಯ್ಯ ಮತ್ತು ಎಸ್. ಚನ್ನಯ್ಯ ನವರು ಕೇಳಿದ ಪ್ರಶ್ನೆಯೊಂದಕ್ಕೆ ಕಾಲಾವಕಾಶವಾಗದೆ
ಉತ್ತರಿಸಲಿಲ್ಲ.
ಚಾಮರಾಜನಗರ– ಸತ್ಯಮಂಗಲ ವಿಭಾಗವು ಚಾಮರಾಜನಗರ– ಮೆಟ್ಟುಪಾಳ್ಯ ನೀರಾವರಿ ಯೋಜನೆಗೆ ಸೇರಿದೆಯೆಂದೂ ಇದರ ಎಂಜಿನಿಯರಿಂಗ್ ಮತ್ತು ಆರ್ಥಿಕ ದೃಷ್ಟಿಯ ಪರಿಶೀಲನೆ ಪೂರ್ಣಗೊಂಡ ನಂತರ ಕೈಗೊಳ್ಳಬೇಕೆಂದು ಕೇಂದ್ರದ ಸಂಚಾರ ಸೌಕರ್ಯ ಸಮಿತಿ ನಿರ್ಧರಿಸಿದೆಯೆಂದೂ ಡಾ. ಗೋಪಾಲಸ್ವಾಮಿ ಅವರು ಪಾರ್ಲಿಮೆಂಟ್‌ಗೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ. ಯೋಜನೆಗೆ 4,56,221 ರೂಗಳು ತಗಲುತ್ತದೆ ಎಂದು ಅಂದಾಜು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.