ADVERTISEMENT

50 ವರ್ಷಗಳ ಹಿಂದೆ | ಗುರುವಾರ, 23–7–1970

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 19:31 IST
Last Updated 22 ಜುಲೈ 2020, 19:31 IST

ಭಾರಿ ಪ್ರವಾಹ: 600 ಜನರಿದ್ದ 24 ವಾಹನಗಳು ನೀರುಪಾಲು

ಡೆಹರಾಡೂನ್‌, ಜುಲೈ 22– ಜೋಷಿಮಠ ಮತ್ತು ಚಮೋಲಿ ನಡುವಣ ಬೇಲಾಕುಚಿ ಬಳಿ ಅಲಕನಂದಾ ನದಿಯ ತುಂಬು ಪ್ರವಾಹದಲ್ಲಿ ಮಂಗಳವಾರ 24 ವಾಹನಗಳು ಕೊಚ್ಚಿ ಹೋಗಿ, ಬದರೀನಾಥ್‌ನಿಂದ ಹಿಂದಿರುಗುತ್ತಿದ್ದ 400 ಮಂದಿ ಯಾತ್ರಿಕರೂ ಸೇರಿ ಒಟ್ಟು 600 ಮಂದಿ ನೀರಿನಪಾಲಾಗಿರುವರೆಂದು ಶಂಕಿಸಲಾಗಿದೆ.

ಗಢ್‌ವಾಲ್‌ನ ಶ್ರೀನಗರದ ಬಳಿ ಗಾಯತ್ರಿ ದೇವಾಲಯದ ಸಮೀಪದಲ್ಲಿ ಹರಿಯುವ ನದಿಯಲ್ಲಿ ಅನೇಕ ದೇಹಗಳು ತೇಲಾಡುತ್ತಿದ್ದುದು ಕಂಡುಬಂದಿತೆಂದು ವರದಿಯಾಗಿದೆ.

ADVERTISEMENT

ದೇಶದ ಎಲ್ಲ ಭಾಗಗಳಿಂದಲೂ ಯಾತ್ರಿಕರನ್ನು ಆಕರ್ಷಿಸುವ ದೇವಾಲಯಗಳನ್ನು ಸುತ್ತುವರಿದ ಪರ್ವತ ಪ್ರದೇಶದಲ್ಲಿ ಸಂಭವಿಸಿದ ದುರಂತಗಳಲ್ಲಿ ಇದೇ ಅತ್ಯಂತ ದೊಡ್ಡದು.

ಭಾರತ ರಕ್ಷಿಸಿ ಕರೆಗೆ ಡಿಎಂಕೆ ಒಪ್ಪಿಗೆ ಸದ್ಯಕ್ಕಿಲ್ಲ‌

ಮದ್ರಾಸ್‌, ಜುಲೈ 22– ‘ಭಾರತವನ್ನು ರಕ್ಷಿಸಿ’ ಎಂಬ ಸಂಸ್ಥಾ ಕಾಂಗ್ರೆಸ್ಸಿನ ಕರೆಯನ್ನು ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂನ ಅಧ್ಯಕ್ಷ ಶ್ರೀ ಎಂ.ಕರುಣಾನಿಧಿ ಅವರು ‘ಸದ್ಯಕ್ಕೆ’ ತಿರಸ್ಕರಿಸಿದ್ದಾರೆ.

ವಾಸ್ತವವಾಗಿ ಸಂಸ್ಥಾ ಕಾಂಗ್ರೆಸ್ಸಿನ ಈ ಕರೆಯು ಕೇಂದ್ರದಲ್ಲಿನ ಶ್ರೀಮತಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರವನ್ನು ಉರುಳಿಸಲು ನಿರ್ದೇಶಿತವಾಗಿದೆ ಎಂದು ಅವರು ಭಾವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.