
ನವದೆಹಲಿ, ಜ. 16– ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರು ಇದೇ 19ರಂದು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಕರ್ನಾಟಕದ ಬಹುದಿನಗಳ ಪ್ರಯತ್ನ ಫಲಪ್ರದವಾಗಲಿದೆ.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಹಿರಿಯ ಐಎಎಸ್ ಅಧಿಕಾರಿ ಕೆ. ಜೈರಾಜ್‌ರನ್ನುನೇಮಕ ಮಾಡಿದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಇನ್‌ಫೋಸಿಸ್ ಮುಖ್ಯಸ್ಥ ಎನ್.ಆರ್. ನಾರಾಯಣಮೂರ್ತಿ ಅಧ್ಯಕ್ಷತೆಯಲ್ಲಿ ನೂತನ ಕಂಪನಿ ಸ್ಥಾಪಿಸಿತ್ತು. ದೇವನಹಳ್ಳಿಯಲ್ಲಿ ಸುಮಾರು ಎರಡು ಸಾವಿರ ಎಕರೆ ಪ್ರದೇಶದಲ್ಲಿ ಸ್ಥಾಪನೆಗೊಳ್ಳಲಿರುವ ವಿಮಾನ ನಿಲ್ದಾಣ ಕಾರ್ಯದ ಹೊಣೆ ಈ ನೂತನ ಕಂಪನಿಯದ್ದಾಗಿದೆ.
ಶ್ರೀನಗರ, ಜ. 16 (ಪಿಟಿಐ)– ಶ್ರೀನಗರದ ಗರಿಷ್ಠ ಭದ್ರತೆಯ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಫಿದಾಯಿನ್ (ಆತ್ಮಹತ್ಯಾ) ದಳ ಇಂದು ಯತ್ನಿಸಿದಾಗ ಉಗ್ರಗಾಮಿಗಳು ಹಾಗೂ ಭದ್ರತಾ ಪಡೆಗಳ ಮಧ್ಯೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಎಲ್ಲಾ 6 ಉಗ್ರಗಾಮಿಗಳು, ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಇಬ್ಬರು ನಾಗರಿಕರು ಸತ್ತಿದ್ದಾರೆ.
ಪಾಕಿಸ್ತಾನ ಮೂಲದ ಲಷ್ಕರ್–ಇ–ತೊಯಿಬಾ ಸಂಘಟನೆಗೆ ಸೇರಿದ ಈ ಉಗ್ರಗಾಮಿಗಳು ಮಾರುತಿ ಜಿಪ್ಸಿಯಲ್ಲಿ ಆಗಮಿಸಿ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಗ್ರೆನೇಡ್‌ಗಳನ್ನು ಎಸೆದು ಗುಂಡಿನ ದಾಳಿ ಆರಂಭಿಸಿದರು. ಮಧ್ಯಾಹ್ನ ಸುಮಾರು 2.45ರಲ್ಲಿ ಈ ದಾಳಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.