* ‘ಒಮ್ಮತವಿದ್ದರೆ ನಿಮ್ನ ವರ್ಗದವರೂ ಮುಖ್ಯಮಂತ್ರಿ ಆಗಲು ಸಾಧ್ಯವಿತ್ತು’
ಬೆಂಗಳೂರು, ಏ. 14– ರಾಜ್ಯದ ಹರಿಜನ– ಗಿರಿಜನ ಶಾಸಕರಲ್ಲಿ ಒಮ್ಮತವಿಲ್ಲವೆಂದು ಕಾರ್ಮಿಕ ಖಾತೆ ರಾಜ್ಯ ಸಚಿವ ಕೆ. ಶ್ರೀರಾಮುಲು ಅವರು ಇಂದು ಇಲ್ಲಿ ವಿಷಾದ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ 32 ಹರಿಜನ– ಗಿರಿಜನ ಶಾಸಕರು ಒಟ್ಟಾಗಿ ಒಂದೇ ಅಭಿಪ್ರಾಯ ಉಳ್ಳವರಾಗಿದ್ದಿದ್ದರೆ ಅವರಲ್ಲೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇತ್ತೆಂದು ಅವರು ಅಭಿಪ್ರಾಯಪಟ್ಟರು.
ಎಚ್.ಎ.ಎಲ್ ಹಿಂದುಳಿದ ಮತ್ತು ದಲಿತ ಕಲ್ಯಾಣ ಸಮಿತಿ ಆಶ್ರಯದಲ್ಲಿ ಪುರಭವನದಲ್ಲಿ ಆಚರಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಅವರ 84ನೇ ಜನ್ಮ ದಿನೋತ್ಸವ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಅವರು ಬಿಡುಗಡೆ ಮಾಡಿದರು.
‘ಇಷ್ಟು ಮಂದಿ ಶಾಸಕರಲ್ಲಿಯೇ ನಾಲ್ಕು– ಐದು ಗುಂಪುಗಳಾಗಿವೆ’ ಎಂದು ವಿಷಾದಿಸಿದ ಸಚಿವರು, ‘ನಾನು ಟೀಕೆ ಮಾಡುತ್ತಿದ್ದೇನೆ ಎಂದು ತಪ್ಪಾಗಿ ಭಾವಿಸಬಾರದು. ಮಂತ್ರಿಯಾಗಿದ್ದೇನೆ ಎಂದು ನಾನು ಈ ಮಾತುಗಳನ್ನು ಹೇಳುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.