ನವದೆಹಲಿ, ಸೆಪ್ಟೆಂಬರ್ 24 (ಪಿಟಿಐ, ಯುಎನ್‌ಐ)– ತೈಲ ಬೆಲೆ ಏರಿಕೆಯಿಂದಾಗಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ನೋಡಿಕೊಳ್ಳಲು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆಯನ್ನು ಶೇ 5ರಷ್ಟು ಕಡಿತಗೊಳಿಸುವಂತೆ ಮನವಿ ಮಾಡಿ ರಾಜ್ಯಗಳಿಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಸಚಿವ ರಾಂ ನಾಯಕ್ ಪತ್ರ ಬರೆದಿದ್ದಾರೆ.
‘ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಮಾರಾಟ ತೆರಿಗೆಯನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ಈ ಸಂಬಂಧ ಎಲ್ಲಾ ಮುಖ್ಯಮಂತ್ರಿಗಳಿಗೂ ಪತ್ರ ಬರೆಯುತ್ತೇನೆ’ ಎಂದು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.
ಅಬಕಾರಿ ಸಿಬ್ಬಂದಿ ದೌರ್ಜನ್ಯ: ಗ್ರಾಮಸ್ಥರಿಂದ ಕಲ್ಲು
ಚಿಕ್ಕಜಾಜೂರು, ಸೆಪ್ಟೆಂಬರ್ 24– ಕಳ್ಳಬಟ್ಟಿ ತಪಾಸಣೆಯ ನೆಪದಲ್ಲಿ ಗ್ರಾಮಕ್ಕೆ ಬಂದು ಮಹಿಳೆಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಅಮಾಯಕನೊಬ್ಬನನ್ನು ಪ್ರಜ್ಞೆ ತಪ್ಪುವಂತೆ ಥಳಿಸಿದ ಅಬಕಾರಿ ಸಿಬ್ಬಂದಿಯ ವರ್ತನೆಯಿಂದ ರೊಚ್ಚಿಗೆದ್ದ ಜನ ಕಲ್ಲುತೂರಾಟ ನಡೆಸಿ, ನಾಲ್ವರನ್ನು ಕೂಡಿ ಹಾಕಿದ ಘಟನೆ ಇಲ್ಲಿಗೆ ಸಮೀಪದ ದಂಡಿಗನಹಳ್ಳಿಯಲ್ಲಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.