ADVERTISEMENT

50 ವರ್ಷಗಳ ಹಿಂದೆ: ಗೋಳ್ವಾಲ್ಕರ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 0:38 IST
Last Updated 4 ಫೆಬ್ರುವರಿ 2023, 0:38 IST
   

ರಾಷ್ಟ್ರಕ್ಕೆಲ್ಲ ಒಂದೇ ಪ್ರಭುತ್ವ, ಒಂದೇ ಶಾಸನಸಭೆ ಇರಲಿ: ಗೋಳ್ವಾಲ್ಕರ್‌ ಪ್ರತಿಪಾದನೆ

ಬೆಂಗಳೂರು, ಫೆ. 3– ರಾಷ್ಟ್ರಕ್ಕೆಲ್ಲಾ ಒಂದೇ ಪ್ರಭುತ್ವ, ಒಂದೇ ಶಾಸನಸಭೆ ಇರಬೇಕೆಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಶ್ರೀ ಗೋಳ್ವಾಲ್ಕರ್‌
ಅವರ ನಿಲುವು.

‘ಆದರೆ ರಾಜ್ಯಗಳ ಶಾಸನಸಭೆಗಳನ್ನೆಲ್ಲಾ ತೊಡೆದುಹಾಕಲು ಸಂವಿಧಾನ ತಿದ್ದುಪಡಿ ಮಾಡುವಂತೆ ಹೇಳುವ ಧೈರ್ಯ ಯಾರಿಗೂ ಇಲ್ಲ. ಭಾರತಕ್ಕೆಲ್ಲಾ ಒಂದೇ ಸರ್ಕಾರ ಹೊಂದೋಣ. ಆಡಳಿತ ಅನುಕೂಲಕ್ಕೆ ತಕ್ಕಂತೆ ರಾಷ್ಟ್ರವನ್ನು ವಲಯಗಳಾಗಿ ವಿಂಗಡಿಸಬಹುದು’ ಎನ್ನುತ್ತಾರೆ.

ADVERTISEMENT

‘ವಲಯಗಳು ಕೆಲವೇ ಆಗಬಹುದು, ಹಲವು ಆಗಬಹುದು. ಜನತೆ ಒಂದು, ಸರ್ಕಾರ ಒಂದು, ಶಾಸನಸಭೆ ಒಂದು ಆಗಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿಪ್ರತಿಪಾದಿಸಿದರು. ‘ಪ್ರಜಾಪ್ರಭುತ್ವ ದೃಷ್ಟಿಯಿಂದ ರಾಜ್ಯಗಳ ಶಾಸನಸಭೆಗಳಿರಬೇಕೆಂದು ವಾದಿಸುತ್ತಾರೆ. ಆದರೆ ಹಲವಾರು ರಾಜ್ಯ ಘಟಕಗಳಿರುವುದಕ್ಕೂ ಪ್ರಜಾಪ್ರಭುತ್ವಕ್ಕೂ ಏನು ಸಂಬಂಧವಿದೆಯೋ ಗೊತ್ತಿಲ್ಲ’ ಎಂದರು.

ರಾಜ್ಯಪಾಲರ ಮಧ್ಯಪ್ರವೇಶ, ಇಲ್ಲವಾದರೆ ರಾಜ್ಯದಾದ್ಯಂತ ಸತ್ಯಾಗ್ರಹ

ಬೆಂಗಳೂರು, ಫೆ. 3– ಕ್ಷಾಮದ ದವಡೆಗೆ ಸಿಕ್ಕಿರುವ ಜನ ಮತ್ತು ಜಾನುವಾರು
ಗಳನ್ನು ರಕ್ಷಿಸಲು ಸರ್ಕಾರಕ್ಕೆ ಶಕ್ತಿ ಸಾಮರ್ಥ್ಯ ಇಲ್ಲವೆಂದು ಎಂ.ಪಿ.ಸಿ.ಸಿ (ಸಂಸ್ಥಾ) ಇಂದು ಇಲ್ಲಿ ಟೀಕಿಸಿ, ರಾಜ್ಯಪಾಲರು ಮಧ್ಯ
ಪ್ರವೇಶಿಸದಿದ್ದರೆ ರಾಜ್ಯದಲ್ಲಿ ಶಾಂತಿಯುತ ಸತ್ಯಾಗ್ರಹ ಹೂಡಲು ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.