
ಪ್ರಜಾವಾಣಿ ವಿಶೇಷ
ಹಾ.ಮಾ. ನಾಯಕ ಇನ್ನಿಲ್ಲ
ಮೈಸೂರು, ನ. 10– ಹೆಸರಾಂತ ಸಾಹಿತಿ, ಅಂಕಣಕಾರ, ಡಾ. ಹಾ.ಮಾ. ನಾಯಕ ಅವರು ಇಂದು ರಾತ್ರಿ 10 ಗಂಟೆಗೆ ಇಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಅಂಕಣ ಸಾಹಿತ್ಯಕ್ಕೆ ನೀಡಿದ ಕೊಡುಗೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿಗೆ ಗಳಿಸಿದ ಕೀರ್ತಿ ಅವರದು. ರಾಜ್ಯೋತ್ಸವ, ಪಂಪ ಪ್ರಶಸ್ತಿ ಸಹ ಅವರಿಗೆ ಸಂದಿವೆ.
*********
ನೀರಾವರಿ: ಸಂತ್ರಸ್ತರಿಗೆ ಶೇ. 5 ಹುದ್ದೆ ಮೀಸಲು
ಬೆಂಗಳೂರು, ನ. 10– ಕೃಷ್ಣಾ ಮೇಲ್ದಂಡೆ ಯೋಜನೆಯೂ ಸೇರಿದಂತೆ ಎಲ್ಲ ನೀರಾವರಿ ಯೋಜನೆಗಳಲ್ಲಿ ನಿರ್ವಸಿತರಾದ ಕುಟುಂಬಗಳಿಗೆ ಸರ್ಕಾರಿ ನೌಕರಿಗಳಲ್ಲಿ ಶೇ. 5ರಷ್ಟು ಸ್ಥಾನಗಳನ್ನು ಮೀಸಲು ನೀಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಭಾರಿ ಮತ್ತು ಮಧ್ಯಮ ನೀರಾವರಿ ಸಚಿವ ಎಚ್.ಕೆ. ಪಾಟೀಲ ಇಂದು ವಿಧಾನಸಭೆಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.