ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಮಂಗಳವಾರ, 21-11-1995

ಮಂಗಳವಾರ 21-11-1995

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 21:04 IST
Last Updated 20 ನವೆಂಬರ್ 2020, 21:04 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಹಠಾತ್ ದಾಳಿಗೆ ತತ್ತರ, ವೀರಪ್ಪನ್ ಪರಾರಿ

ಈರೋಡ್, ನ. 20 (ಪಿಟಿಐ, ಯುಎನ್ಐ)– ಕರ್ನಾಟಕ ಮತ್ತು ತಮಿಳುನಾಡು ವಿಶೇಷ ಕಾರ್ಯಪಡೆ ಇಂದು ಅಂತಿಯೂರು ಅರಣ್ಯದಲ್ಲಿ ಹಠಾತ್ ಕಾರ್ಯಾಚರಣೆ ನಡೆಸಿ, ಇಪ್ಪತ್ತು ದಿನಗಳ ಹಿಂದೆ ಕುಖ್ಯಾತ ನರಹಂತಕ ವೀರಪ್ಪನ್ ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ತಮಿಳುನಾಡು ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಯನ್ನು ಮಧ್ಯಾಹ್ನ 3.10ರ ವೇಳೆಗೆ ರಕ್ಷಿಸಿತು. ಆದರೆ, ವೀರಪ್ಪನ್ ಪರಾರಿಯಾಗಿದ್ದಾನೆ.

ಇವರ ಬಿಡುಗಡೆಗೆ ವೀರಪ್ಪನ್ ಮೂರು ಕೋಟಿ ರೂಪಾಯಿ ಹಣ ಕೇಳಿದ್ದ. ಹಲವು ಷರತ್ತುಗಳೊಡನೆ ಗಡುವು ಹೇರುತ್ತ, ತನ್ನ ಕೋರಿಕೆ ಈಡೇರಿಸದಿದ್ದರೆ ಈ ಮೂವರ ತಲೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದ.

ADVERTISEMENT

ಹಟ್ಟಿ ಚಿನ್ನದ ಗಣಿ ಲಾಕೌಟ್

ರಾಯಚೂರು, ನ. 20– ಕಳೆದ ಒಂದು ವಾರದಿಂದ ಮುಷ್ಕರ ನಡೆಯುತ್ತಿದ್ದ ಹಟ್ಟಿ ಚಿನ್ನದ ಗಣಿಯಲ್ಲಿ ಆಡಳಿತ ವರ್ಗ ಹಾಗೂ ಕಾರ್ಮಿಕ ಸಂಘದ ಮಧ್ಯೆ ನಡೆದ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಇಂದು ಲಾಕೌಟ್ ಘೋಷಿಸಲಾಯಿತು. ಇದರಿಂದ, ಮೊದಲೇ ಬಿಗುವಿನಿಂದ ಕೂಡಿದ್ದ ವಾತಾವರಣ ಮತ್ತಷ್ಟು ಪ್ರಕ್ಷುಬ್ಧಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.