ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಬುಧವಾರ, 15–11–1995

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 19:31 IST
Last Updated 14 ನವೆಂಬರ್ 2020, 19:31 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬಹುರಾಷ್ಟ್ರೀಯ ಸಂಸ್ಥೆಗೆ ಭೂಮಿ: ರಾಜ್ಯದ ಕ್ರಮಕ್ಕೆ ಕೋರ್ಟ್‌ ಅಸ್ತು

ನವದೆಹಲಿ, ನ.14: ಭೂ ಸ್ವಾಧೀನ ಕಾಯ್ದೆ ಅನ್ವಯ ಬೆಂಗಳೂರು ಸಮೀಪದ ವೈಟ್‌ಫೀಲ್ಡ್‌ ಬಳಿ ಉನ್ನತ ತಂತ್ರಜ್ಞಾನ ಮಾಹಿತಿ ಸಮುಚ್ಚಯಕ್ಕಾಗಿ ಕರ್ನಾಟಕ ಸರ್ಕಾರವು ತುರ್ತು ಅಧಿಕಾರ ಬಳಸಿ ಭೂಮಿ ವಶಪಡಿಸಿಕೊಂಡ ಕ್ರಮವನ್ನು ಸುಪ್ರೀಂ ಕೋರ್ಟ್‌ ಇಂದು ಎತ್ತಿ ಹಿಡಿಯಿತು.

ಸಿಂಗಾಪುರದ ಬಹುರಾಷ್ಟ್ರೀಯ ಕಂಪನಿಯು ಟಾಟಾ ಉದ್ಯಮ ಸಂಸ್ಥೆ ಮತ್ತು ಕರ್ನಾಟಕ ಕೈಗಾರಿಕೆ ಅಭಿವೃದ್ಧಿ ಮಂಡಲಿಯ ಸಹಯೋಗದಲ್ಲಿ ಉನ್ನತ ತಂತ್ರಜ್ಞಾನ ಮಾಹಿತಿ ಸಮುಚ್ಚಯವನ್ನು (ಟೆಕ್ನಾಲಜಿ ಪಾರ್ಕ್‌) ನಿರ್ಮಿಸಲು ಉದ್ದೇಶಿಸಿದ್ದು ಅದಕ್ಕಾಗಿ ಭೂ ಸ್ವಾಧೀನ ಕಾಯ್ದೆ ತುರ್ತು ವಿಧಿಗಳ ಅನ್ವಯ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.