ADVERTISEMENT

75 ವರ್ಷಗಳ ಹಿಂದೆ: ಭಾರತದ ನೀತಿ ‘ನ್ಯಾಯಪಥ’

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 20:39 IST
Last Updated 3 ಆಗಸ್ಟ್ 2025, 20:39 IST
<div class="paragraphs"><p>75 ವರ್ಷಗಳ ಹಿಂದೆ</p></div>

75 ವರ್ಷಗಳ ಹಿಂದೆ

   

ನವದೆಹಲಿ, ಆಗಸ್ಟ್‌ 3: ‘ಭಾರತದ ಕೊರಿಯಾ ನೀತಿಯಿಂದ ಇಂದು ಜಗತ್ತಿನ ಮೇಲೆ ತೀವ್ರ ಪರಿಣಾಮ ವಾಗದಿರಬಹುದು; ಆದರೆ ಕಾಲಾನುಕ್ರಮದಲ್ಲಿ ವ್ಯಾಪಕ ಸ್ಥಿತ್ಯಂತರ ಆಗಿಯೇ ಆಗುವುದು’ ಎಂಬುದಾಗಿ ಭಾರತದ ಪ್ರಧಾನಿ ಜವಾಹರರು, ತಮ್ಮ ಸರಕಾರದ ಕೊರಿಯಾ ನೀತಿಗೆ ಪಾರ್ಲಿಮೆಂಟಿನ ಸಮ್ಮತಿ ಬಯಸುತ್ತ ನುಡಿದರು.

‘ಏನೇ ಸಂಭವಿಸಲಿ, ಈ ವಿಶಾಲ ಜಗತ್ತಿನ ಯಾವುದೇ ರಾಷ್ಟ್ರದ ಧೋರಣೆಗೆ ಮೂಕ ಸಮ್ಮತಿಯ ಮುದ್ರೆ ಹಾಕಲು ನಾನು ಸಿದ್ಧನಿಲ್ಲ. ಕೈಗೊಂಬೆ ಅಥವಾ ಕೀಲು ಯಂತ್ರದಂತಹ ವರ್ತನೆ ವ್ಯಕ್ತಿಗೆ ಹೇಗೋ ರಾಷ್ಟ್ರಕ್ಕೂ ಹಾಗೆ ಅವನತಿಕರ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.