ವಾಷಿಂಗ್ಟನ್, ಜುಲೈ 23– (ರಾಯಿಟರ್ಸ್)– ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹವಾದ ಗುರುವಿಗೆ ಇನ್ನೊಂದು ಪುಟ್ಟ ಚಂದ್ರ ಇರುವುದನ್ನು ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಇದರಿಂದಾಗಿ ಗುರು ಗ್ರಹದ ಉಪಗ್ರಹಗಳ ಸಂಖ್ಯೆ 17ಕ್ಕೆ ಏರಿದಂತಾಗಿದೆ. ಸುಮಾರು ಐದು ಕಿ.ಮೀ. ಸುತ್ತಳತೆಯಷ್ಟು ಗಾತ್ರದ ಈ ಉಪಗ್ರಹ ಸೌರವ್ಯೂಹದಲ್ಲಿರುವ ದೊಡ್ಡ ಗ್ರಹಗಳಿಗೆ ಇರುವ ಉಪಗ್ರಹಗಳ ಪೈಕಿ ಅತ್ಯಂತ ಕಿರಿಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.