ವಿವಿ ಕನ್ನಡ ಪರ ಕ್ರಮಕ್ಕೆ ಅಡ್ಡಗಾಲು
ಬೆಂಗಳೂರು, ಸೆಪ್ಟೆಂಬರ್ 17– ಪದವಿ ತರಗತಿಗಳಿಗೆ ಏಕರೂಪದ ಕನ್ನಡ ಪಠ್ಯಕ್ರಮ ಅಳವಡಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೂಚಿಸಿರುವ ಸರ್ಕಾರದ ಕ್ರಮ ಹೊಸ ವಿವಾದವೊಂದಕ್ಕೆ ದಾರಿ ಮಾಡಿಕೊಟ್ಟಿದೆ.
ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಗಳು (ವಿಶ್ವವಿದ್ಯಾಲಯ ಆಡಳಿತ) ಬರೆದ ಈ ಸರ್ಕಾರಿ ಪತ್ರ ಬೆಂಗಳೂರು ವಿವಿಯ ಕನ್ನಡ ಪರ ತೀರ್ಮಾನಕ್ಕೆ ಅಡ್ಡಗಾಲು ಹಾಕಲು ಹೊರಟಿದೆ ಎಂದು ಅಧ್ಯಾಪಕ ವಲಯ ಆಕ್ರೋಶ ವ್ಯಕ್ತಪಡಿಸಿದೆ.
ಅಹಮದಾಬಾದ್‌ನಲ್ಲಿ ಗೋಲಿಬಾರ್: ಏಳು ಸಾವು
ಅಹಮದಾಬಾದ್, ಸೆಪ್ಟೆಂಬರ್ 17 (ಪಿಟಿಐ)– ವ್ಯಾಪಕ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟ ಮುನಿಸಿಪಲ್ ಚುನಾವಣೆಯ ಮತದಾನ ಒಟ್ಟು ಏಳು ಬಲಿಗಳನ್ನು ತೆಗೆದುಕೊಂಡಿತು. 43 ಜನ ಗಾಯಗೊಂಡರು. ಹತ್ತು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಗೋಲಿಬಾರ್‌ನಲ್ಲಿ ಆರು ಜನ ಪ್ರಾಣ ಕಳೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.