
ಗಾಂಧಿನಗರ, ಜ. 27 (ಪಿಟಿಐ, ಯುಎನ್‌ಐ)– ಶುಕ್ರವಾರ ಬೆಳಿಗ್ಗೆ ಭೀಕರ ಭೂಕಂಪಕ್ಕೆ ಸಿಕ್ಕಿ ತತ್ತರಿಸಿರುವ ಗುಜರಾತಿನಲ್ಲಿ ಇಂದು ಇನ್ನಷ್ಟು ಲಘು ಕಂಪನಗಳು ಸಂಭವಿಸಿದ್ದು, ಸತ್ತವರ ಸಂಖ್ಯೆ 16,000ಕ್ಕೂ ಹೆಚ್ಚಾಗಿರುವ ಸಾಧ್ಯತೆಗಳಿವೆ.
ಕುಸಿದುಬಿದ್ದ ಕಟ್ಟಡಗಳ ಅಡಿ ಇನ್ನೂ ಸಾವಿರಾರು ಮಂದಿ ಸಿಲುಕಿ ಹಾಕಿಕೊಂಡಿದ್ದು, ಅವರನ್ನು ಹೊರೆತೆಗೆಯುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.
ಭೂಕಂಪಪೀಡಿತ ಕಚ್ ಜಿಲ್ಲೆಗೆ ಭೇಟಿ ನೀಡಿ ವಾಪಸಾಗಿರುವ ಗುಜರಾತಿನ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್, ಕಚ್ ಜಿಲ್ಲೆಯೊಂದರಲ್ಲೇ 15 ಸಾವಿರಕ್ಕೂ ಹೆಚ್ಚು ಜನರು ಸತ್ತಿರುವ ಶಂಕೆ ವ್ಯಕ್ತಪಡಿಸಿದರು.
ಬೆಂಗಳೂರು, ಜ. 27– ರಾಜ್ಯದಲ್ಲಿ ಕಳೆದ ತಿಂಗಳ 29ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದ ವಿದ್ಯುತ್ ದರ ಏರಿಕೆಯಿಂದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ವಿನಾಯಿತಿ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ.
ಏರಿಸಿರುವ ದರವನ್ನು ರೈತರ ಪರವಾಗಿ ಸರ್ಕಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ (ಕೆಪಿಟಿಸಿಎಲ್) ಭರಿಸಬೇಕಾಗುತ್ತದೆ. ಈ ತೀರ್ಮಾನದಿಂದ ಒಂದು ಎಚ್‌ಪಿಗೆ ವರ್ಷಕ್ಕೆ ರೂ. 240ರಂತೆ ಸರ್ಕಾರ ರೈತರಿಗೆ ಸಬ್ಸಿಡಿ ನೀಡಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.