ADVERTISEMENT

25 ವರ್ಷಗಳ ಹಿಂದೆ | ರಾಜ್ಯ–ರೈಲ್ವೆ ಸಹಭಾಗಿತ್ವದ ಕಂಪನಿ: ಒಪ್ಪಂದಕ್ಕೆ ಅಂಕಿತ

ಗುರುವಾರ, ಸೆಪ್ಟೆಂಬರ್‌ 21, 2000

ಪ್ರಜಾವಾಣಿ ವಿಶೇಷ
Published 20 ಸೆಪ್ಟೆಂಬರ್ 2025, 23:36 IST
Last Updated 20 ಸೆಪ್ಟೆಂಬರ್ 2025, 23:36 IST
   

ರಾಜ್ಯ–ರೈಲ್ವೆ ಸಹಭಾಗಿತ್ವದ ಕಂಪನಿ: ಒಪ್ಪಂದಕ್ಕೆ ಅಂಕಿತ

ನವದೆಹಲಿ, ಸೆ.20 (ಪಿಟಿಐ, ಯುಎನ್‌ಐ)– ಕರ್ನಾಟಕದಲ್ಲಿ ಈಗಾಗಲೇ ಆರಂಭವಾಗಿರುವ ₹1,639 ಕೋಟಿ ವೆಚ್ಚದ ನಾಲ್ಕು ರೈಲ್ವೆ ಯೋಜನೆಗಳ ಶೀಘ್ರ ಅಭಿವೃದ್ಧಿಗಾಗಿ ರೈಲ್ವೆ ಸಚಿವಾಲಯ ಕರ್ನಾಟಕ ಸರ್ಕಾರದೊಂದಿಗೆ ಸಹಭಾಗಿತ್ವದ ಕಂಪನಿಯೊಂದನ್ನು ಸ್ಥಾಪಿಸಿದೆ.

ಈ ಸಂಬಂಧ ತಿಳುವಳಿಕೆ ಪತ್ರಕ್ಕೆ ಇಂದು ಇಲ್ಲಿ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಮತ್ತು ಕರ್ನಾಟದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಸಮ್ಮುಖದಲ್ಲಿ ರೈಲ್ವೆ ಮಂಡಳಿಯ ಹೆಚ್ಚುವರಿ ಸದಸ್ಯ ಪಿ.ಕೆ ವಾಹಿ ಹಾಗೂ ಮೂಲಸೌಲಭ್ಯ ವಿಭಾಗದ ಪ್ರಧಾನ ಕಾರ್ಯದರ್ಶಿ ಬಿ.ಕೆ ದಾಸ್‌ ಅವರು ಸಹಿ ಹಾಕಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.