ADVERTISEMENT

50 ವರ್ಷಗಳ ಹಿಂದೆ: ಶನಿವಾರ, ಆಗಸ್ಟ್‌ 29, 1970

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 15:15 IST
Last Updated 28 ಆಗಸ್ಟ್ 2020, 15:15 IST
   

ಕನ್ನಡದಲ್ಲೇ ಕಲಿತ ಕನ್ಯೆಯರು

ಬೆಂಗಳೂರು, ಆ. 28– ಇನ್ನೊಂದು ವರ್ಷದಲ್ಲಿ ಕೆಲವು ವಿದ್ಯಾರ್ಥಿನಿಯರು ಪದವೀಧರೆಯರಾಗುತ್ತಾರೆ. ಕನ್ನಡ ಮಾಧ್ಯಮದಲ್ಲಿ ಪದವಿ ಪಡೆಯುವುದು ಈ ತಂಡದ ವಿಶೇಷ.

ಬೆಂಗಳೂರಿನಲ್ಲಿರುವ ಮಹಾರಾಣಿ ಕಾಲೇಜ್‌ ರಾಜ್ಯದಲ್ಲೇ ಅತಿ ಹಿರಿದಾದ ಮಹಿಳಾ ಶಿಕ್ಷಣ ಸಂಸ್ಥೆ. 2,700 ಮಂದಿ ವಿದ್ಯಾರ್ಥಿನಿಯರಿದ್ದಾರೆ.

ADVERTISEMENT

67–68ನೇ ಸಾಲಿನಲ್ಲಿ ಕನ್ನಡ ಪಿ.ಯು.ಸಿ ತರಗತಿ ಆರಂಭವಾಯಿತು. ಈ ವರ್ಷ ಎರಡನೇ ವರ್ಷದ ಬಿ.ಎ ಪದವಿ ತರಗತಿ ನಡೆಯುತ್ತಿದೆ. 225 ವಿದ್ಯಾರ್ಥಿನಿಯರಿದ್ದು ಪಿ.ಯು.ಸಿ ತರಗತಿಗಳು ಮೂರಾಗಿವೆ. ಎರಡನೇ ವರ್ಷದ ಬಿ.ಎ ತರಗತಿಯ ಪಠ್ಯಪುಸ್ತಕಗಳಿನ್ನೂ ಪ್ರಕಟವಾಗದಿರುವುದು ಒಂದು ಕೊರತೆ.

ಉನ್ನತ ಮಟ್ಟದ ತಾಮ್ರದ ಅದಿರಿನ ನಿಕ್ಷೇಪ ಪತ್ತೆ

ಬೆಂಗಳೂರು, ಆ. 28– ಗುಲ್ಬರ್ಗ ಜಿಲ್ಲೆಯಲ್ಲಿ ಕೃಷ್ಣಾ ನದಿ ದಂಡಯಲ್ಲಿರುವ ತಿಂತಿಣಿ ಗ್ರಾಮದ ಬಳಿ ಉನ್ನತ ಮಟ್ಟದ ತಾಮ್ರದ ಅದಿರಿನ ನಿಕ್ಷೇಪ ಪತ್ತೆಯಾಗಿದೆ.

ರಾಜ್ಯದ ಗಣಿ ಮತ್ತು ಭೂಗರ್ಭ ಶಾಖೆಯ ತೀವ್ರ ಪರಿಶೋಧನೆಯ ಫಲವಾಗಿ ಪತ್ತೆಯಾಗಿರುವ ಈ ನಿಕ್ಷೇಪ ವ್ಯಾಪಕವಾಗಿದೆಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.